ಹಿರೇಕೆರೂರು, ಗೋಕಾಕ್ , ಕಾಗವಾಡ, ವಿಜಯನಗರದಲ್ಲಿ ಅರಳಿದ ‘ಕಮಲ’:  ಶಿವಾಜಿನಗರದಲ್ಲಿ ‘ಕೈ ‘ ಅಭ್ಯರ್ಥಿಗೆ ಜಯ…

Promotion

ಬೆಂಗಳೂರು, ಡಿ,9,2019(www.justkannada.in):  ರಾಜ್ಯದ 15 ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ದಾಪುಗಾಲಿಡುವ ಮೂಲಕ ಬಿಎಸ್ ವೈ ಸರ್ಕಾರ ಸೇಫ್ ಆಗಿದೆ.

ಈ ನಡುವೆ ಹಿರೇಕೆರೂರು, ಗೋಕಾಕ್, ಕಾಗವಾಡ, ಕೆ.ಆರ್ ಪುರಂ, ಯಲ್ಲಾಪುರ, ಚಿಕ್ಕಬಳ್ಳಾಪುರ, ಕೆ.ಆರ್ ಪೇಟೆ, ಮಹಾಲಕ್ಷ್ಮೀ ಲೇಔಟ್, ವಿಜಯನಗರದಲ್ಲಿ ಬಿಜೆಪಿ ಈಗಾಗಲೇ ಗೆಲುವು ಸಾಧಿಸಿದ್ದು ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಗೆಲುವಿನ ಸನಿಹದಲ್ಲಿದ್ದಾರೆ.

ಹಿರೇಕೆರೂರಿನಲ್ಲಿ ಬಿ.ಸಿ ಪಾಟೀಲ್, ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ, ಕಾಗವಾಡ ಶ್ರೀಮಂತ್ ಪಾಟೀಲ್, ಕೆ.ಆರ್ ಪುರಂ ನಲ್ಲಿ ಭೈರತಿ ಬಸವರಾಜ್, ಯಲ್ಲಾ ಪುರದಲ್ಲಿ ಶಿವರಾಂ ಹೆಬ್ಬಾರ್ , ಕೆ.ಆರ್ ಪೇಟೆಯಲ್ಲಿ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೋಪಾಲಯ್ಯ, ವಿಜಯನಗರದಲ್ಲಿ ಆನಂದ್ ಸಿಂಗ್ ಗೆಲುವು ಸಾಧಿಸಿದ್ದು ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಇನ್ನೊಂದೆಡೆ ಹುಣಸೂರು ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಮತ್ತು ಶಿವಾಜಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ಗೆಲುವಿನ ನಗೆ ಬೀರಿದ್ದಾರೆ. ಇತ್ತ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆ ಮುಖಭಂಗವಾಗಿದೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮುನ್ನಡೆ ಸಾಧಿಸಿದ್ದಾರೆ.

Key words:  by election-bjp –congress- jds- bjp gorvrnament- safe