ಅಧಿಕಾರಕ್ಕಾಗಿ ಶಾಸಕರ ಖರೀದಿ: ಹಣ ವಾಪಸ್ ಪಡೆಯಲು ಜನರ ಬಳಿ ಲೂಟಿ- ಬಿಜೆಪಿ ಸರ್ಕಾರದ ವಿರುದ್ಧ ಯುಟಿ ಖಾದರ್ ವಾಗ್ದಾಳಿ.

Promotion

ಮಂಗಳೂರು,ನವೆಂಬರ್,24,2022(www.justkannada.in):  ಬಿಜೆಪಿಯವರು ಅಧಿಕಾರಕ್ಕಾಗಿ ಶಾಸಕರನ್ನ ಖರೀದಿಸಿದರು. ನಂತರ  ಆ ಹಣವನ್ನ ವಾಪಸ್ ಪಡೆಯಲು ಜನರ ಬಳಿ ಲೂಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ವಾಗ್ದಾಳಿ ನಡೆಸಿದರು.

ಇಂದು ಮಾತನಾಡಿದ ಶಾಸಕ ಯು.ಟಿ ಖಾದರ್, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿಲ್ಲ.  ಸೈಲನ್ಸರ್ ಮಾತ್ರ ಇದೆ.  ಬಿಜೆಪಿ ಸರ್ಕಾರ ಜನಪರ ಕೆಲಸ ಮಾಡುತ್ತಿಲ್ಲ.  ಬಿಜೆಪಿ ಸರ್ಕಾರಕ್ಕೆ ಪೂರ್ಣ ಅಧಿಕಾರ ಸಿಕ್ಕಿಲ್ಲ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕಾಗಿ ಶಾಸಕರನ್ನ ಖರೀದಸಿದರು.  ಹಣ ವಾಪಸ್ ಪಡೆಯಲು ಜನರಿಂಧ ಲೂಟಿ ಮಾಡಿದರು.

ಜನರಿಗೆ ಮನೆ ಇಲ್ಲ. ಉದ್ಯೋಗವಿಲ್ಲ. ಪರೇಶ್ ಮೇಸ್ತಾ ಮೂಲಕ ಗೆದ್ದಿದ್ದೀರಿ.  ಹಾಗೆಯೇ ಪರೇಶ್ ಮೇಸ್ತಾ ಮೂಲಕವೇ  ಮನೆಗೆ ಹೋಗುತ್ತೀರಿ ಎಂದು ಯುಟಿ ಖಾದರ್ ಕಿಡಿಕಾರಿದರು.

Key words: Buying –mla-power-Looting –money-  UT Khader – against -BJP government.