ನಾನು ಆರೋಗ್ಯವಾಗಿದ್ದೇನೆ. ಯಾರೂ ಆತಂಕಪಡಬೇಡಿ- ನಟ ಉಪೇಂದ್ರ ಸ್ಪಷ್ಟನೆ.

ಬೆಂಗಳೂರು,ನವೆಂಬರ್,24,2022(www.justkannada.in):  ಚಿತ್ರೀಕರಣ ವೇಳೆ ನಟ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಡಸ್ಟ್ ಅಲರ್ಜಿ ಆಗಿದ್ದು, ಈ ಹಿನ್ನೆಲೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ.

ನಟ ಉಪೇಂದ್ರ ಅವರು ಬೆಂಗಳೂರಿನ ನೆಲಮಂಗಲದ ಹರ್ಷ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು ಎನ್ನಲಾಗಿದೆ. ಅವರು ಆಸ್ಪತ್ರೆಗೆ ತೆರಳಿರುವ ವಿಚಾರ ಕೇಳಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

ಈ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಳದಿಂದಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ನಟ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.  ನಾನು ಆರೋಗ್ಯವಾಗಿದ್ದೇನೆ.  ಯಾರೂ ಆತಂಕಪಡಬೇಡಿ ಸ್ವಲ್ಪ ಡಸ್ಟ್ ಸ್ಮೋಕ್ ನಿಂದ ಕೆಮ್ಮು ಬಂದಿತ್ತು. ನಾನು ಆರಾಮವಾಗಿದ್ದೇನೆ. ಯಾರು ಗಾಬರಿ ಪಡಬೇಡಿ ಎಂದಿದ್ದಾರೆ.

Key words: actor –Upendra-hospital-fan- healthy. No worry