ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ.

Promotion

ಮೈಸೂರು,ಆಗಸ್ಟ್,30,2021(www.justkannada.in): ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ  ಬಸ್ ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹುಣಸೂರು ತಾಲ್ಲೂಕಿನ ಕಲ್ ಬೆಟ್ಟ ಬಳಿ ಈ ಘಟನೆ ನಡೆದಿದೆ. ಮಹದೇವ  ಗಂಭೀರ ಗಾಯಗೊಂಡ ಬಸ್ ಚಾಲಕ.  ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹುಣಸೂರು ಬಸ್ ಡಿಪೋಗೆ ಸೇರಿದ ಬಸ್ ಡಿಕ್ಕಿಯಾಗಿದೆ. ಕುಶಾಲನಗರದಿಂದ ಬೆಳಗಳೂರಿಗೆ ಬಸ್ ತೆರಳುತ್ತಿತ್ತು ಎನ್ನಲಾಗಿದ್ದು ಚಾಲಕ ಮಹದೇವಗೆ ಗಂಭೀರ ಗಾಯವಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.truck-collision-bike-rider-dies-on-the-spot-mysore

ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Key words: Bus –collides- lorry- Driver- seriously injured-mysore