ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಸಿಎಫ್ ಐ ಪ್ರತಿಭಟನೆ: 50ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ.

ಮಂಗಳೂರು,ಆಗಸ್ಟ್,30,2021(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿ  ಖಂಡಿಸಿ ಮಂಗಳೂರಿನ ಕೊಣಾಜೆ ವಿವಿಯಲ್ಲಿ ಸಿಪಿಎಫ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಗೆ ಸಿಎಫ್ ಐ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇಂದು ಕೊಣಾಜೆ ವಿವಿ ಕ್ಯಾಂಪಸ್ ನಲ್ಲಿ ಸಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಪೊಲೀಸರು ಸಿಎಫ್ ಐ ನ 50ಕ್ಕೂ ಹೆಚ್ಚು ಕಾರ್ಯಕರ್ತರನ್ನ ಬಂಧಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಧ್ಯಯುಗದ ಇತಿಹಾಸ ತೆಗೆಯಲಾಗಿದೆ. ಪ್ರಾಚೀನ ಮತ್ತು ಇಂದಿನ ಇತಿಹಾಸವನ್ನ ಮಾತ್ರ ಬೋಧಿಸಲಾಗುತ್ತಿದೆ. ಪ್ರಾಚೀನ ಇತಿಹಾಸದಲ್ಲಿ ಮೌಢ್ಯತೆ ತುಂಬಿದೆ. ಇದನ್ನ ಮಕ್ಕಳಿಗೆ ಕಲಿಸಲು ಆಗಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.

Key words: CFI -Protest –Against- National Education Policy- arrest -more than- 50 activists.