ಶಬರಿಮಲೆಗೆ ತೆರಳುತ್ತಿದ್ದಾಗ ಬಸ್ ಅಪಘಾತ: ಕರ್ನಾಟಕದ 17 ಮಂದಿ ಭಕ್ತರಿಗೆ ಗಂಭೀರ ಗಾಯ.

Promotion

ಕೇರಳ, ಅಕ್ಟೋಬರ್ 18,2023(www.justkannada.in): ಶಬರಿಮಲೆಗೆ ತೆರಳುತ್ತಿದ್ದಾಗ ಬಸ್ ಅಪಘಾತಕ್ಕೀಡಾಗಿ ಕರ್ನಾಟಕದ 17 ಮಂದಿ ಶಬರಿಮಲೆ ಭಕ್ತರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆ ಎರುಮೇಲಿಯ ಕಣಮಲ ಬಳಿ ನಡೆದಿದೆ.

 ಖಾಸಗಿ ಬಸ್​​, ಟೆಂಪೋ ಟ್ರಾವೆಲರ್ಸ್​ನಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಶಬರಿಮಲೆಗೆ ತೆರಳುತ್ತಿದ್ದರು. ಈ ನಡುವೆ ಎರುಮೇಲಿಯ ಕಣಮಲ ಬಳಿ ಬಸ್​ ಅಪಘಾತಕ್ಕೀಡಾಗಿದ್ದು,  ಪರಿಣಾಮ ಬಸ್​​ನಲ್ಲಿದ್ದ 50 ಜನರ ಪೈಕಿ 17 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳು ಮುಳಬಾಗಿಲು ತಾಲೂಕಿನ ತಮ್ಮರೆಡ್ಡಿಹಳ್ಳಿ, ಬಂಗವಾದಿ, ಮಜರಾ ಕಿತ್ತೂರು ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಇನ್ನು ಗಾಯಾಳುಗಳನ್ನು ವಿವಿಧ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Bus accident – Sabarimala- Karnataka -17 devotees – seriously injured.