ದಸರಾ ವೀಕ್ಷಣೆಗಿಲ್ಲ ದುಬಾರಿ: ಬಿಡುಗಡೆಯಾದ ಕೇವಲ 20 ನಿಮಿಷದಲ್ಲೇ ಎಲ್ಲಾ ಗೋಲ್ಡ್ ಕಾರ್ಡ್, ಟಿಕೆಟ್ ಗಳು ಸೋಲ್ಡ್ ಔಟ್..

ಮೈಸೂರು,ಅಕ್ಟೋಬರ್,18,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾದ ಐತಿಹಾಸಿಕ ಜಂಬೂಸವಾರಿ ಮತ್ತು ಪಂಜಿನ ಕವಾಯತು ವೀಕ್ಷಣೆಗೆ ಲಕ್ಷಾಂತರ ಜನರು ಕುತೂಹಲದಿಂದ ಕಾಯುತ್ತಿರುತ್ತಾರೆ.  ಇದಕ್ಕಾಗಿ ಟಿಕೆಟ್ ಖರೀದಿಸಲು ಸಹ ಅಷ್ಟೇ ಲಕ್ಷಾಂತರ ಜನ ಕಾಯುತ್ತಿದ್ದರು. ಆದರೆ ಗೋಲ್ಡ್ ಕಾರ್ಡ್ ಟಿಕೆಟ್ ಗಳು ಬಿಡುಗಡೆಯಾದ ಇಪ್ಪತ್ತೇ ನಿಮಿಷದಲ್ಲಿ ಎಲ್ಲಾ ಟಿಕೆಟ್ ಗೋಲ್ಡ್ ಕಾರ್ಡ್ ಗಳು ಖರೀದಿಯಾಗಿವೆ.

ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಇಂದು 10 ಗಂಟೆಗೆ ಸಮಯ ನಿಗದಿ ಮಾಡಲಾಗಿತ್ತು. ಆನ್ ಲೈನ್ ಮೂಲಕ https://mysoredasara.gov.in  ವೆಬ್ ಸೈಟ್ ನಲ್ಲಿ ಖರೀದಿ ಮಾಡಬಹುದಾಗಿತ್ತು. ಈ ನಡುವೆ  ಇಂದು 10 ಗಂಟೆ ಬದಲು 11 ಗಂಟೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಮಾಡಲಾಗಿದ್ದು, ಆದರೆ ಬಿಡುಗಡೆ ಮಾಡಿದ ಕೇವಲ 20 ನಿಮಿಷಗಳಲ್ಲೇ ಎಲ್ಲಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಗಳು ಖರೀದಿಯಾಗಿವೆ.

ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಗೆ   6,000 ರೂ., ಅರಮನೆ A. 3,000 ರೂ,, ಅರಮನೆ B  2,000 ರೂ, ಪಂಜಿನ ಕವಾಯತು ವೀಕ್ಷಣೆಗೆ- 500 ರೂ ಹಣ ನಿಗದಿ ಮಾಡಲಾಗಿತ್ತು. ಹಣ ದುಬಾರಿಯಾದರೂ ಸಹ ಕೇವಲ 20 ನಿಮಿಷದಲ್ಲಿ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿರುವುದು ಅಚ್ಚರಿ ಮೂಡಿಸಿದೆ. ಹಣ ಎಷ್ಟೇ ದುಬಾರಿಯಾದರೂ ಸಹ ದಸರಾ ಜಂಬೂ ಸವಾರಿ ನೋಡಲು ಜನರಿಗೆ ಸಂಭ್ರಮ,  ಕುತೂಹಲವಂತೂ ಕಡಿಮೆಯಾಗಲ್ಲ

ಪ್ರತಿವರ್ಷ ದಸರಾ ಜಂಬೂ ಸವಾರಿ ವೀಕ್ಷಣೆಗೆ ರಾಜ್ಯ, ದೇಶದ ಬೇರೆ ಬೇರೆ ಭಾಗಗಳಿಂದಲೂ ಸಹ ಪ್ರವಾಸಿಗರು ದಸರಾ ಜಂಬೂಸವಾರಿ ನೋಡಲು ಆಗಮಿಸುತ್ತಾರೆ. ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅಭಿಮನ್ಯು ಸಾಥ್ ನೀಡುವ ದಸರಾ ಗಜಪಡೆಯ ಆನೆಗಳು,  ಸ್ತಬ್ದಚಿತ್ರಗಳು ಕಲಾತಂಡಗಳ ಪ್ರದರ್ಶನ ಎಲ್ಲವನ್ನೂ ಕಣ್ತುಂಬಿಕೊಳ್ಳಲು  ಲಕ್ಷಾಂತರ ಮಂದಿ ಆಗಮಿಸುತ್ತಾರೆ.

Key words: mysore dasara- All- Gold Card-Tickets -Sold Out –Within- 20 Minutes