ರಾಜಕೀಯ ದುರುದ್ಧೇಶ ಹಾಗೂ ಮತ್ತೆ ನಾಯಕತ್ವ ಪಡೆಯಲು ಬಿಎಸ್ ವೈ ಧರಣಿ- ಮಾಜಿ ಸಿಎಂ ವೀರಪ್ಪ ಮೊಯ್ಲಿ.

Promotion

ಬೆಂಗಳೂರು,ಜುಲೈ,5,2023(www.justkannada.in): ವೈಯಕ್ತಿಕ ವರ್ಚಸ್ಸು, ರಾಜಕೀಯ ದುರುದ್ಧೇಶ ಹಾಗೂ ಮತ್ತೆ ನಾಯಕತ್ವ ಪಡೆಯಲು ಬಿಎಸ್ ಯಡಿಯೂರಪ್ಪ  ಧರಣಿ ಮಾಡಿದ್ದಾರೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವೀರಪ್ಪ ಮೊಯ್ಲಿ, ಧರಣಿ ಮಾಡುವ ಮೂಲಕ ಕೇಂದ್ರ ನಾಯಕರಿಂದ ಶಹಬ್ಬಾಶ್ ಗಿರಿ ಪಡೆಯಲು ಬಿಎಸ್ ವೈ ಪ್ರಯತ್ನ ಪಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಕಾಮನ್ ನಾಲೇಡ್ಜ್ ಇಲ್ಲ. ಕಾಂಗ್ರೆಸ್ ನವರು ಮಹಾನ್ ಬುದ್ದಿವಂತರು ಎಂದರು.

ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳು ಲಾಭದಲ್ಲಿ ನಡೆಯುತ್ತಿವೆ. ಈ ಹಿಂದೆ ಸಾರಿಗೆ ಸಂಸ್ಥೆಗಳು ಬಹಳ ನಷ್ಟದಲ್ಲಿ ನಡೆಯುತ್ತಿದ್ದವು. ಬಡವರಿಗೆ ಹಣ ಕೊಟ್ರೆ ಮರಳಿ ಲಾಭ ಬರುತ್ತೆ. ಶ್ರೀಮಂತರಿಗೆ ಹಣ ಕೊಟ್ರೆ ಮರಳಿ ಬರಲ್ಲ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

Key words: BSY- strike – regain- leadership- Former CM -Veerappa Moily.