ಬಿಎಸ್ ವೈ ಮಾರ್ಗದರ್ಶನದಲ್ಲೇ ನಾವೇ ಮತ್ತೆ ಅಧಿಕಾರಕ್ಕೆ- ಹುಟ್ಟುಹಬ್ಬದ ಶುಭಕೋರಿದ ಸಿಎಂ ಬೊಮ್ಮಾಯಿ.

Promotion

ಬೆಂಗಳೂರು,ಫೆಬ್ರವರಿ,27,2022(www.justkannada.in): ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬ ಹಿನ್ನೆಲೆ ಇಂದು ಬೆಂಬಲಿಗರು ಅಭಿಮಾನಿಗಳು ವಿಶೇಷ ಪೂಜೆ  ಸಲ್ಲಿಸಿಸುತ್ತಿದ್ದಾರೆ. ಅಲ್ಲದೆ ಬಿಎಸ್ ವೈಗೆ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳು, ರಾಜಕೀಯ ನಾಯಕರು ಶುಭಕೋರಿದ್ದಾರೆ.

ಈ ನಡುವೆ ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶುಭಕೋರಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ವೈ ಮಾತಿಗೆ ತಪ್ಪದ ವ್ಯಕ್ತಿ. ಸಿಎಂ ಆಗಿದ್ದಾಗ ಆನೇಕ ಜನಪರ ಕೆಲಸ ಮಾಡಿದ್ದಾರೆ. ಅವರ ಮಾರ್ಗದರ್ಶನ ನಮಗೆ ಅವಶ್ಯಕ. ಬಿಎಸ್ ವೈ ಕಾರ್ಯಕ್ರಮ ನಮಗೆ ಶ್ರೀರಕ್ಷೆ ಇದ್ದಂತೆ. ನಾವು ಅವರ ಮಾರ್ಗದರ್ಶನದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ.  2023ರಲ್ಲಿ ಮತ್ತೆ ಅಧಿಕಾರಿಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: BSY-Birthday-CM Bommai