ಮೇಕೆದಾಟು ಯೋಜನೆ ಸಂಬಂಧ ಸಿಎಂ ಸರ್ವಪಕ್ಷ ಸಭೆ ಕರೆಯಲಿ- ಡಿಕೆ ಶಿವಕುಮಾರ್ ಆಗ್ರಹ.

ಬೆಂಗಳೂರು,ಫೆಬ್ರವರಿ,27,2022(www.justkannada.in):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಇಂದಿನಿಂದ ಕಾಂಗ್ರೆಸ್ 2ನೇ ಹಂತದ ಪಾದಯಾತ್ರೆ ನಡೆಸುತ್ತಿದ್ದು ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಸರ್ವಪಕ್ಷ ಸಭೆ ಕರೆಯಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಸಿದ್ಧರಾಮಯ್ಯ ಅವರು ಸಿಎಂ ಜತೆ ಮಾತನಾಡಿದ್ದೇವೆ.   ಅವರು ಪಾದಯಾತ್ರೆ ಮಾಡಬೇಡಿ ಎಂದಿಲ್ಲ. ಅಲ್ಲದೆ ಸಮಾವೇಶಕ್ಕೆ ಅನುಮತಿ ನೀಡಿದ್ದಾರೆ. ಮೇಕೆದಾಟು ಯೋಜನೆ ಸಂಬಂಧ ಸರ್ವಪಕ್ಷ ಸಬೇ ಕರೆಯುವುದಾಗಿ ಹೇಳಿದ್ರು.  ಆದ್ರೆ ಈವರೆಗೆ ಸಭೆ ಕರೆದಿಲ್ಲ.  ಮೊದಲು ಸರ್ವಪಕ್ಷ ಸಭೆ ಕರೆಯಲಿ ಎಂದು ಒತ್ತಾಯಿಸಿದರು.

ಪಾದಯಾತ್ರೆಗೆ  ಬರುವವರು ಮೆಟ್ರೋದಲ್ಲಿ ಬನ್ನಿ ಬೆಂಗಳೂರಿಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ.  ಸ್ವಲ್ಪ ಟ್ರಾಫಿಕ್ ಸಮಸ್ಯೆ ಆದರೂ ಪರವಾಗಿಲ್ಲ ನಮಗೆ ಕುಡಿಯುವ ನೀರು ಮುಖ್ಯ ಎಂದರು.

Key words: CM -call – all-party –meeting-DK Shivakumar