ಬಿ.ಎಸ್ ಯಡಿಯೂರಪ್ಪನವರ ಗನ್ ಮ್ಯಾನ್ ಗಳಲ್ಲಿ ಒಬ್ಬ ಇಡಿ ಅಧಿಕಾರಿ ಇರ್ತಾರೆ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೊಸಬಾಂಬ್.

Promotion

ಬೆಂಗಳೂರು,ಡಿಸೆಂಬರ್,14,2022(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಗನ್ ಮ್ಯಾನ್ ಗಳಲ್ಲಿ ಒಬ್ಬ ಇಡಿ ಅಧಿಕಾರಿ ಇರುತ್ತಾರೆ. ಅದಕ್ಕೆ ಪಕ್ಷದ ವಿರುದ್ಧ ಮಾತನಾಡಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಮಾತನಾಡಿದ ಎಂ. ಲಕ್ಷ್ಮಣ್, ಬಿ.ಎಸ್ ಯಡಿಯೂರಪ್ಪ ಎಲ್ಲೇ ಇದ್ದರೂ ಇಡಿ ಅಧಿಕಾರಿ ಇರುತ್ತಾರೆ ಗನ್ ಮ್ಯಾನ್ ಸಮವಸಸ್ತ್ರದಲ್ಲೇ ಬರುತ್ತಾರೆ. ಬಿಎಸ್ ವೈ ಎಲ್ಲಿ ಹೋದರೂ ಇಡಿ ಅಧಿಕಾರಿ ಜೊತೆಯಲ್ಲಿ ಇರ್ತಾರೆ. ಆ ಅಧಿಕಾರಿಯೇ ಬಿಎಸ್ ವೈ ಬಾಯಿಂದ ಹೇಳಿಕೆ ಕೊಡಿಸುತ್ತಾರೆ.

ಹೀಗಾಗಿ ಪಕ್ಷದ ವಿರುದ್ದ ಬಿಎಸ್ ವೈ ಮಾತನಾಡಲು ಹೋಗಲ್ಲ. ಗನ್ ಮ್ಯಾನ್ ರೂಪದಲ್ಲಿ ಇಡಿ ಅಧಿಕಾರಿ ಇರುವುದರಿಂದ ಬಿಎಸ್ ವೈ ಮಾತನಾಡಲು ಹೋಗಲ್ಲ. ಆ ಅಧಿಕಾರಿ ಯಾರೆಂದು ನಾನು ತೋರಿಸುತ್ತೇನೆ ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.

Key words:  BS Yeddyurappa’s -gunmen – ED officer – KPCC spokesperson- M. Laxman