ಬಿಎಸ್ ವೈ ರಾಜ್ಯ ಕಂಡ ವಿಶೇಷ ರಾಜಕಾರಣಿ: ಪೂರ್ಣಾವಧಿ ಅಧಿಕಾರ ಅವರಿಗೆ ನೀಡಬೇಕಿತ್ತು- ಎಂ.ಬಿ ಪಾಟೀಲ್.

Promotion

ಬೆಂಗಳೂರು,ಜುಲೈ,23,2022(www.justkannada.in): ಬಿಎಸ್ ಯಡಿಯೂರಪ್ಪ ರಾಜ್ಯ ಕಂಡ ವಿಶೇಷ ರಾಜಕಾರಣಿ: ಬಿಜೆಪಿ ಅವರಿಗೆ ಪೂರ್ಣಾವಧಿ ಅಧಿಕಾರ ನೀಡಬೇಕಿತ್ತು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ  ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಶಿಕಾರಿಪುರ ಕ್ಷೇತ್ರವನ್ನ ಪುತ್ರ ಬಿವೈ ವಿಜಯೇಂದ್ರಗೆ ಬಿಎಸ್ ಯಡಿಯೂರಪ್ಪ ಬಿಟ್ಟುಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಹೋರಾಟ ಮಾಡಿ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ.  ಅಧಿಕಾರ ಬಂದ ಬಳಿಕ ಬಿಎಸ್ ವೈ ಅವರನ್ನ ಮೂಲೆಗುಂಪು ಮಾಡಿದ್ದಾರೆ. ದಕ್ಷಿಣ ಭಾರತಯದಲ್ಲಿ ಬಿಜಹೆಪಿ ಬರುಲು ಬಿಎಸ್ ವೈ ಕಾರಣ ಪೂರ್ಣಾವಧಿ ಅಧಿಕಾರಮಾಡಲು ಅವಕಾಶ ಕೊಡಬೇಕಿತ್ತು ಎಂದರು.

ಬಿಎಸ್ ವೈ ಕೆಳಮಟ್ಟದಿಂದ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಬಿಎಸ್ ವೈ ರಾಜ್ಯ ಕಂಡ ವಿಶೇಷ ರಾಜಕಾರಣಿ. ಬಿಜೆಪಿಯಲ್ಲಿ ಬಿಎಸ್ ​ವೈ ಮಾಸ್ ಲೀಡರ್. ಎಲ್ಲಾ ಸಮುದಾಯಗಳು ಈಗ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ ಎಂದು ಎಂಬಿ ಪಾಟೀಲ್ ತಿಳಿಸಿದರು.

Key words: BS Yeddyurappa-special- politician-MB Patil