ಬಿಎಸ್ ವೈ ಕ್ಷೇತ್ರದ ತ್ಯಾಗದ ಬಗ್ಗೆ ಪುತ್ರ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ಏನು ಗೊತ್ತೆ..?

Promotion

ಶಿವಮೊಗ್ಗ,ಜುಲೈ,22,2022(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಅಚ್ಚರಿಯ ನಿರ್ಧಾರವೊಂದನ್ನ ಕೈಗೊಂಡಿದ್ದು, ಪುತ್ರ ಬಿವೈ ವಿಜಯೇಂದ್ರಗಾಗಿ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ ವೈ ಪುತ್ರ ವಿಜಯೇಂದ್ರ, ತಂದೆ ಬಿಎಸ್ ವೈ ನಿರ್ಧಾರಕ್ಕೆ ಬದ್ಧ.  ಪಕ್ಷ ಹೈಕಮಾಂಡ್ ತೀರ್ಮಾನದಂತೆ ಮುಂದೆ ನಡೆಯುತ್ತೇನೆ.  ಅಪ್ಪನ ನಿರ್ಧಾರವನ್ನ ಸ್ವಾಗತಿಸುವೆ.  ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಆದರೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿಲ್ಲ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಎಲ್ಲಾ ಗೊಂದಲಕ್ಕೂ ಬಿಎಸ್ ವೂ ತೆರೆ ಎಳೆದಿದ್ದಾರೆ.

ತಮ್ಮ ತಂದೆ ಹಿಂದೆ ಸರಿದರೂ ಪಕ್ಷಕ್ಕಾಗಿಯೇ ದುಡಿಯುತ್ತಾರೆ. ಇದು ಸ್ವಂತ ನಿರ್ಧಾರವಾಗಿದೆ. ತಂದೆಯ ಈ ನಿರ್ಧಾರಕ್ಕೆ ವಿಶೇಷ ಕಾರಣವಿಲ್ಲ. ಕ್ಷೇತ್ರದ ಮುಖಂಡ ಆಶಯದಂತೆ ಯಡಿಯೂರಪ್ಪ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

Key words: bs yeddyurappa- shikaripura-by vijayendra