ಆಡಳಿತ ನಡೆಸಲು ನಿಮ್ಮಿಂದ ಆಗದಿದ್ರೆ ನಾನು ಸರ್ಕಾರ ಮಾಡಲು ಸಿದ್ಧ ಎಂದ್ರು ಬಿ.ಎಸ್ ಯಡಿಯೂರಪ್ಪ: ಸಿಎಂ ಗ್ರಾಮವಾಸ್ತವ್ಯದ ಬಗ್ಗೆ  ವ್ಯಂಗ್ಯ…

Promotion

ಬೆಂಗಳೂರು,ಜೂ,22,2019(www.justkannada.in):  ಸರ್ಕಾರ ನಡೆಸಲು ನಿಮ್ಮಿಂದ ಆಗದಿದ್ರೆ ನಾನು ಸರ್ಕಾರ ರಚಿಸಲು ಸಿದ್ಧನಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನನ್ನ ಪ್ರಕಾರ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರಲ್ಲ. ಒಂದು ಕಡೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಹೋದರೇ. ಇತ್ತ ಕಡೆ ಹೆಚ್.ಡಿ ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾರೆ. ರಾಜ್ಯ ರಾಜಕಾರಣದಲ್ಲಿ ಏನು ಬೇಕಾದ್ರೂ ಬದಲಾವಣೆಯಾಗಬಹುದು. ಹೀಗಾಗಿ ರಾಜ್ಯ ಸಮ್ಮಿಶ್ರ ಸರ್ಕಾರ  ಹೆಚ್ಚು ದಿನ ಇರುವ ವಿಶ್ವಾಸವಿಲ್ಲ ಎಂದು ನುಡಿದರು.

ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಬಗ್ಗೆ ವ್ಯಂಗ್ಯವಾಡಿದ ಬಿಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಅವರು ಸುಳ್ಳು ಭರವಸೆ ಕೊಟ್ಟು ಒಂದು ದಿನ ವಾಸ್ತವ್ಯ ಮಾಡಿ  ವಾಪಸ್ ಬಂದಿದ್ದಾರೆ.  ಮಳೆ ಬಂತು ಅಂತ ಕುಂಟು ನೆಪ ಹೇಳಿ ವಾಪಸ್ ಆಗಿದ್ದಾರೆ ಎಂದು ಕಿಡಿಕಾರಿದರು.

key words: BS Yeddyurappa – ready -government –cm hd kumaraswamy