ಟಿಪ್ಪು ಸುಲ್ತಾನ್ ಕಾಲದಲ್ಲಿ ಆರಂಭಿಸಿದ್ದ ದೀವಟಿಗೆ ಸಲಾಂ ಪೂಜೆಗೆ ಬ್ರೇಕ್.

ಮಂಗಳೂರು,ಡಿಸೆಂಬರ್,10,2022(www.justkannada.in):  ಟಿಪ್ಪು ಸುಲ್ತಾನ್ ಕಾಲದಲ್ಲಿ ಆರಂಭವಾಗಿದ್ದ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ದೀವಟಿಗೆ ಸಲಾಂ ಪೂಜೆಗೆ ರಾಜ್ಯ ಧಾರ್ಮಿಕ ಪರಿಷತ್ ಬ್ರೇಕ್ ಹಾಕಿದೆ.

ಇನ್ಮುಂದೆ ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ ದೀವಿಟಿಗೆ ಸಲಾಂ ಪೂಜೆ ಪೂಜೆಯನ್ನು ಮಾಡದಂತೆ ರಾಜ್ಯ ಧಾರ್ಮಿಕ ಷರಿಷತ್  ಸುತ್ತೋಲೆ ಹೊರಡಿಸಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲ,  ಮಹಾಲಿಂಗೇಶ‍್ವರ ದೇಗಲ, ಕೊಲ್ಲೂರಿನಲ್ಲಿ ದೀವಟಿಗೆ ಸಲಾಂ ಪೂಜೆ ನಡೆಯುತ್ತಿತ್ತು.

ಟಿಪ್ಪು ಕಾಲದಲ್ಲಿ ಆರಂಭವಾಗಿದ್ದ ದೀವಟಿಗೆ ಸಲಾಂ ಪೂಜೆ ರಾಜ್ಯದ  ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುತ್ತಿತ್ತು.  ಮುಜರಾಯಿ ಇಲಾಖೆ ಎನ್ನುವ ಹೆಸರನ್ನೂ ರಾಜ್ಯ ಧಾರ್ಮಿಕ ಪರಿಷತ್ ಬದಲಾಯಿಸಿದ್ದು, ಇದನ್ನು ಇದೀಗ ಧರ್ಮಾದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ.

Key words: Break – Salaam Puja – started –during- Tipu Sultan- time.