ಗಡಿವಿವಾದ: ಸೋಮವಾರ ರಾಜ್ಯ ಸಂಸದರ ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿ- ಸಿಎಂ ಬೊಮ್ಮಾಯಿ.

ಬೆಂಗಳೂರು,ಡಿಸೆಂಬರ್,10,2022(www.justkannada.in): ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ನಿಯೋಗ ಕೇಂದ್ರ ಗೃಹ ಸಚಿವರನ್ನ ಭೇಟಿ ಮಾಡಿದೆ.  ನಾನು ಅಮಿತ್ ಶಾ ಜೊತೆ ಫೋನ್ ಮಾಡಿ ಚರ್ಚಿಸಿದ್ದೇನೆ. ನನ್ನನ್ನೂ ಕೂಡ ಸಭೆಗೆ ಅಮಿತ್ ಶಾ ಕರೆದಿದಾರೆ. ಉಭಯ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಗಡಿ ಬಗ್ಗೆ ವಿವರಿಸುವೆ ಎಂದರು.

ಸೋಮವಾರ ಸಂಸದರ ನಿಯೋಗ ಅಮಿತ್ ಶಾ ಭೇಟಿ ಮಾಡಲಿದ್ದಾರೆ. ಹೀಗಾಗಿ ಕರ್ನಾಟಕದ ನಿಲುವು ವಾಸ್ತವಾಂಶ ಸಂಸದರಿಗೆ ತಿಳಿಸಿದ್ದೇನೆ. ನಮ್ಮ ಸಂಸದರಿಗೆ ಎಲ್ಲಾ ವಿವರಗಳನ್ನ ಕೂಡ ಕೊಟ್ಟಿದ್ದೇನೆ. ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆಯುತ್ತೇನೆ. ಈ ಸಂಬಂಧ ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ,  ಸಿದ್ಧರಾಮಯ್ಯ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.

Key words: border-dispute-delegation -state –MPs- Union Home Minister – Monday.

ENGLISH SUMMARY..

Border row: Delegation from State to meet Union Home Minister on Monday – CM Bommai
Bengaluru, December 10, 2022 (www.justkannada.in): A delegation from the State will visit Union Home Minister Amit Sha on Monday, over the Maharashtra-Karnataka border issue, according to Chief Minister Basavaraj Bommai.
Speaking in Bengaluru today, he informed that the delegation from Maharashtra has already met the Union Home Minister. “I have discussed with Amit Sha over the phone and he has invited me also. He will be discussing the issue with both the Chief Ministers. I will discuss the border issue with him,” he said.
The delegation will have our MPs and I have explained them about our views on the issue. All the details have been apprised to our MPs. An all party meeting will be convened soon. I will also talk with former CMs H.D. Kumaraswamy and Siddaramaiah also, he informed.
Keywords: CM Bommai/ Maharashtra-Karnataka/ border row/ Union Minister/ Amit Sha