ಈ ಬಾರಿ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋರನ್ನ ಕರೆಸಬಾರದು- ರೈತ ಮುಖಂಡ ಬಡಗಲಾಪುರ ನಾಗೇಂದ್ರ…

Promotion

ಮೈಸೂರು,ಡಿ,7,2019(www.justkannada.in): ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋರನ್ನ ಆಹ್ವಾನಿಸಿರುವುದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವೀರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ  ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋರನ್ನ ಕರೆಸಬಾರದು. ಯಾವುದೇ ಕಾರಣಕ್ಕೂ ಅವರನ್ನು ಕರೆಸಬಾರದು. ಅವರು ನಮ್ಮ ರೈತರಿಗೆ ಮಾರಾಕವಾಗಿದ್ದಾರೆ. ಇವರಿಂದ ನಮ್ಮ‌ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರನ್ನ‌ ಕರೆಸಿದರೆ ರೈತ ಸಂಘಟನೆಗಳಿಂದ ನೀವು ತೊಂದರೆ ಎದುರಿಸಬೇಕಾಗುತ್ತದೆ. ಭಾರತ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರತಿವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೇರೆ ಬೇರೆ ದೇಶದ ಗಣ್ಯರನ್ನ ಮುಖ್ಯ ಅತಿಥಿಗಳಾಗಿ ಕರೆಸುವುದು ವಾಡಿಕೆಯಾಗಿದ್ದು ಈ ಬಾರಿ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋ ಅವರನ್ನ ಆಹ್ವಾನಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Key words: Brazilian- Prime Minister- Bolsenaron- not – republic day-Farmer leader -Badagalapura Nagendra.