ಬ್ರಾಂಡ್ ಕುಸಿವ ಭೀತಿ: ಅಂಬಾಸಿಡರ್ ದೀಪಿಕಾ ಪಡುಕೋಣೆ ಮೇಲೆ ಎಫೆಕ್ಟ್

Promotion

ಬೆಂಗಳೂರು, ಜನವರಿ 14, 2020 (www.justkannada.in): ದೀಪಿಕಾ ಪಡುಕೋಣೆ ಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲಿಸಿ ಕ್ಯಾಂಪಸ್ ಪ್ರವೇಶ ಮಾಡಿದ ನಂತರ ಜಾಹೀರಾತು ಕಂಪೆನಿಗಳು ಎಚ್ಚೆತ್ತುಕೊಳ್ಳುತ್ತಿವೆ.

ದೀಪಿಕಾ ಸಿನಿಮಾಗಳಿಗಿಂತ ಹೆಚ್ಚಾಗಿ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಜಾಹೀರಾತುಗಳಿಂದ ಅತೀ ಹೆಚ್ಚು ಹಣ ಪಡೆಯುವ ಟಾಪ್ ನಟಿಯರಲ್ಲಿ ದೀಪಿಕಾ ಒಬ್ಬರು. ದೀಪಿಕಾ ಜೊತೆ ಜಾಹೀರಾತು ಕಂಪೆನಿಗಳು ಕೋಟಿ ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.

ಲಕ್ಸ್, ಬ್ರಿಟಾನಿಯಾ ಗುಡ್ ಡೇ, ಆಕ್ಸಿಸ್ ಬ್ಯಾಂಕ್, ತನಿಷ್ಕ್, ಲೋರಿಯಲ್, ವಿಸ್ತಾರ್ ಏರ್ ಲೈನ್ ಸೇರಿದಂತೆ ಸಾಕಷ್ಟು ಬ್ರ್ಯಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಈ ಎಲ್ಲಾ ಬ್ರ್ಯಾಂಡ್ ಗಳ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ದೀಪಿಕಾ ಕಾಣಿಸಿಕೊಂಡಿರುವ ಜಾಹೀರಾತು ಬಿಟ್ಟು ಬೇರೆ ಜಾಹೀರಾತು ಪ್ರಸಾರ ಮಾಡಲು ನಿರ್ಧರಿಸಿವೆ ಎನ್ನಲಾಗಿದೆ.