ಕೆರೆಯಲ್ಲಿ ಈಜಲು ಹೋಗಿ ಜಾರ್ಖಂಡ್ ಮೂಲದ ಬಾಲಕ ಸಾವು…

Promotion

ಮೈಸೂರು,ಜೂ,4,2019(www.justkannada.in): ಕೆರೆಯಲ್ಲಿ ಈಜಲು ಹೋದ ಜಾರ್ಖಂಡ್ ಮೂಲದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆದಿತ್ಯ ಕುಮಾರ್  (10) ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿದ ಬಾಲಕ.ಈತ ಜಾರ್ಖಾಂಡ್ ಮೂಲದವರಾಗಿದ್ದು, ಆದಿತ್ಯ ಕುಮಾರ್ ತಂದೆ ತಾಯಿ ಎಚ್.ಡಿ.ಕೋಟೆ ತಾಲ್ಲೂಕಿನ ಪಡುಕೋಟೆ ಗ್ರಾಮದ ತೋಟದಲ್ಲಿ‌ ಕೆಲಸ‌ ಮಾಡುತ್ತಿದ್ದರು. ಜಾರ್ಖಂಡ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಶಾಲೆ ರಜೆ ಅಂಗವಾಗಿ ತಂದೆ ತಾಯಿ ಬಳಿ ಆಗಮಿಸಿದ್ದನು.

ಈ ನಡುವೆ ಸಹೋದರನೊಡನೆ ಕೆರೆಗೆ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ.  ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  boy died of swimming in the lake.

#hdkote #boy #died #swimming #crimenews