Wednesday, August 19, 2026

BDA Apartments

Home Front Page ಮೈಸೂರು: ಎರಡು ವಿಶೇಷ ಮಾದರಿಯ ಹೋಂಡಾ ವಾಹನಗಳು ಲೋಕಾರ್ಪಣೆ…

ಮೈಸೂರು: ಎರಡು ವಿಶೇಷ ಮಾದರಿಯ ಹೋಂಡಾ ವಾಹನಗಳು ಲೋಕಾರ್ಪಣೆ…

ಮೈಸೂರು,ಜೂ4,2019(www.justkannada.in): ಹೋಂಡಾ ಅಧಿಕೃತವಾಗಿ ಎರಡು ಹೊಸ ಸೀಮಿತ ಆವೃತ್ತಿಯ ಎರಡು ವಾಹಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೋಂಡಾ ಆ್ಯಕ್ಟಿವಾ 5ಜಿ ಮತ್ತು ಹೋಂಡಾ ಸಿಬಿ ಶೈನ್. ಈ ಎರಡು ವಾಹನಗಳು ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ನಕ್ಷಾ ಶೋರೂಂನಲ್ಲಿ ಲಭ್ಯವಿದೆ.

ಸೀಮಿತ ಆವೃತ್ತಿಯ ಹೋಂಡಾ ಆ್ಯಕ್ಟಿವಾ  : ಈ ವಿಶೇಷ ಹೋಂಡಾ ಆ್ಯಕ್ಟಿವಾ ಕಪ್ಪು ಬಣ್ಣದ ರಿಮ್ ಹೊಂದಿದೆ. ಇದು ಕ್ರೋಮಾ ಮಪ್ಲರ್ ಹೊಂದಿದ್ದು ಸಂಪೂರ್ಣ ಬ್ಲ್ಯಾಕಡ ಔಟ್ ಇಂಜಿನ್ ಜೊತೆಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ಜೊತೆಗೆ ಎರಡು ವಿಶೇಷವಾದ ಡ್ಯುಯಲ್ ಬಣ್ಣಗಳೊಂದಿಗೆ ದೊರೆಯಲಿದೆ. ಒಂದು ಬಿಳಿ ಮತ್ತು ಸಿಲ್ವರ್ ಮತ್ತೊಂದು ಮೆಟಾಲಿಕ್ ಸಿಲ್ವರ್ ಮತ್ತು ಕಪ್ಪು ಬಣ್ಣವನ್ನು ಹೊಂದಿದೆ.

ಇದರ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ಇದು 109.19ಸಿಸಿಯಾಗಿದ್ದು ಹವಾನಿಯಂತ್ರಿತ ಇಂಜಿನ್ ಹೊಂದಿದೆ. ಇದು 7.96 ಸಾಮರ್ಥ್ಯದ ಶಕ್ತಿಯನ್ನು ಹೊಂದಿದೆ.

ಇದರ ಜೊತೆಗೆ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಸೀಮಿತ  ಆವೃತ್ತಿಯ ಹೋಂಡಾ ಸಿಬಿ ಶೈನ್ ಹೊಸದಾದ ಆಕರ್ಷಕ ಗ್ರಾಫಿಕ್ ಡಿಸೈನ್‌ನ್ನು ಹೊಂದಿದೆ. ಇದು ಹೊಸ ಎರಡು ಡ್ಯಯಲ್ ಬಣ್ಣದಲ್ಲಿ ಲಭ್ಯವಿದೆ. ಕಪ್ಪು ಮತ್ತು ಮೆಟಾಲಿಕ್ ಕೆಂಪು ಹಾಗೂ ಕಪ್ಪು ಮತ್ತು ಮೆಟಾಲಿಕ್ ಸಿಲ್ವರ್ ಬಣ್ಣದಲ್ಲಿ ಸಿಗಲಿದೆ. ಇದು 124.73 ಸಿಸಿ ಸಾಮರ್ಥ್ಯವನ್ನು ಹೊಂದಿದ್ದು 10.16 ಪವರ್ ಸಾಮರ್ಥ್ಯವಿದೆ. ಜೊತೆಗೆ ಹವಾನಿಯಂತ್ರಿತ ಇಂಜಿನ್ ಇದಾಗಿದೆ.

ಈ ಎರಡು ಸೀಮಿತ ವಾಹನಗಳನ್ನು ಮೈಸೂರಿನ ಸಯ್ಯಾಜಿರಾವ್ ರಸ್ತೆಯ ನಕ್ಷಾ ಶೋರೂಂನಲ್ಲಿ ಮಾಜಿ ಶಾಸಕ ವಾಸು ಲೋಕಾರ್ಪಣೆಗೊಳಿಸಿದರು. ಈ ವೇಳೆ ನಕ್ಷಾ ಹೋಂಡಾದ ಪಾಲುದಾರ ಅಭಿಷೇಕ್ ಹೆಗ್ಡೆ ಹಿರಿಯ ವಕೀಲರಾದ ಹರೀಶ್ ಹೆಗ್ಡೆ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಸಂಪಾದಕರಾದ ಹೆಚ್.ಎನ್ ವೆಂಕಟೇಶ್ ಬಿಜೆಪಿ ಮುಖಂಡ ಬಿ.ಪಿ ಮಂಜುನಾಥ್ ನಕ್ಷಾ ಹೋಂಡಾದ ಜನರಲ್ ಮ್ಯಾನೇಜರ್ ಕಾರ್ತಿಕ್ ನಾಯಕ್ ಹಾಜರಿದ್ದರು.

Key words: Mysore: Two special model Honda vehicles are launched

#Mysore #specialmodel #Honda #vehicles #launched