ಬಾರ್ಡರ್ ಗವಾಸ್ಕರ್ ಟೆಸ್ಟ್: ಭಾರತಕ್ಕೆ ಇನ್ನಿಂಗ್ಸ್ ಹಾಗೂ 132 ರನ್ ಗಳ ಭರ್ಜರಿ ಜಯ.

ನಾಗ್ಪುರ,ಫೆಬ್ರವರಿ,11,2023(www.justkannada.in):  ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್  ಸರಣಿಯ ಮೊದಲ ಪಂದ್ಯದಲ್ಲಿ  ಭಾರತ ತಂಡ ಇನ್ನಿಂಗ್ಸ್ ಹಾಗೂ 132 ರನ್​ಗಳ  ಭರ್ಜರಿ ಜಯ ಸಾಧಿಸಿದೆ.

ಈ ಮೂಲಕ  4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸಮನ್ ಗಳನ್ನ 177 ರನ್ ಗೆ ರೋಹಿತ್ ಪಡೆ ಕಟ್ಟಿ ಹಾಕಿದರು. ಮೊದಲ ಇನ್ಸಿಂಗ್ ನಲ್ಲಿ ರವೀಂದ್ರ ಜಡೆಜಾ 5 ವಿಕೆಟ್ ಕಬಳಿಸಿ ಮಿಂಚಿದರು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 400 ರನ್ ಬಾರಿಸಿ 223 ರನ್‌ ಗಳ ಮುನ್ನಡೆ ಸಾಧಿಸಿತು.  ಕ್ಯಾಪ್ಟನ್ ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಆಲ್ ರೌಂಡರ್ಸ್ ರವೀಂದ್ರ ಜಡೆಜಾ ಮತ್ತು ಅಕ್ಷರ್ ಪಟೇಲ್ ಅವರು ಅರ್ಧಶತಕ ಬಾರಿಸಿದರು.

2ನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾದ ಕೇವಲ 91 ರನ್‌ಗಳಿಗೆ ಆಲ್ ಔಟ್ ಆಯಿತು. ಟೀಂ ಇಂಡಿಯಾ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ರವೀಂದ್ರ ಜಡೇಜಾ  70 ರನ್ ಹಾಗೂ 7 ವಿಕೆಟ್ ಪಡೆದು ಮಿಂಚಿದರೆ, ಅಕ್ಷರ್ ಪಟೇಲ್ 84 ರನ್ ಹಾಗೂ 1 ವಿಕೆಟ್ ಪಡೆದರು. ಹಾಗೆಯೇ ಈ ಇಬ್ಬರಲ್ಲದೆ ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿದ ರವಿಚಂದ್ರನ್ ಅಶ್ವಿನ್ ಎರಡೂ ಇನ್ನಿಂಗ್ಸ್​ಗಳಿಂದ ಒಟ್ಟು 8 ವಿಕೆಟ್ ಪಡೆದು ಗೆಲುವಿನ ಹೀರೋ ಎನಿಸಿಕೊಂಡರು.

Key words: Border Gavaskar- Test- India -won – innings -132 runs.