ಗಡಿ ವಿವಾದ : ಪ್ರಧಾನಿ ಮೋದಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

Promotion

ಧಾರವಾಡ,ನವೆಂಬರ್,28,2,22(www.justkannada.in):  ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಧಾರವಾಡದಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗಡಿ ವಿವಾದ ಮುಗಿದ ಅಧ್ಯಾಯ. ಕರ್ನಾಟಕದಲ್ಲಿರುವ ಮರಾಠಿಗರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ನೆಮ್ಮದಿಯಿಂದ ಬದುಕಿತ್ತಿದ್ದಾರೆ. ನಾವು ಚೀನಾ ಪಾಕಿಸ್ತಾನದ ಜೊತೆ ಬಡಿದಾಡಬೇಕು ಅದುಬಿಟ್ಟು ಕರ್ನಾಟಕ, ಮಹಾರಾಷ್ಟ್ರ  ಅಂತಾ ಬಡಿದಾಟ ಸರಿಯಲ್ಲ ಎಂದರು.

ಗಡಿವಿವಾದ ಸುಪ್ರೀಂಕೋರ್ಟ್ ನಲ್ಲಿದೆ. ಸುಪ್ರೀಂನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕರ್ನಾಟಕಕ್ಕೆಗೆ  ಒಂದಿಚೂ ಭೂಮಿ ಮಹಾರಾಷ್ಟ್ರಕ್ಕೆ  ಒಂದಿಚು ಭೂಮಿ ಹೋಗಲ್ಲ.  ಹೋಗಲ್ಲ. ಮಹಾರಾಷ್ಟ್ರದಿಂದ ಒಂದಿಂಚು ಭೂಮಿ ನಮಗೆ ಬರಲ್ಲ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: Border –dispute- No need -PM 0 to intervene – Union Minister- Prahlad Joshi.