“ಎಲುಬಿಲ್ಲದ ನಾಲಿಗೆಯಲ್ಲಿ ಕಪೋಲಕಲ್ಪಿತ ಆರೋಪಗಳ ಮಾಡುವುದು ಸುಲಭ” : ಯತ್ನಾಳ್ ವಿರುದ್ಧ ರಘು ಕೌಟಿಲ್ಯ ಕಿಡಿ

Promotion

ಮೈಸೂರು,ಫೆಬ್ರವರಿ,18,2021(www.justkannada.in) : ಪಕ್ಷದಿಂದ ಉಚ್ಚಾಟಿಸಲ್ಪಟ್ಟುಕೊಳ್ಳಲೇ ಬೇಕೆಂದು ನಿರ್ಧರಿಸಿದಂತೆ ವರ್ತಿಸುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ‌ ಅವರೇ, ಎಲುಬಿಲ್ಲದ ನಾಲಿಗೆಯಲ್ಲಿ ಕಪೋಲಕಲ್ಪಿತ ಆರೋಪಗಳನ್ನು ಮಾಡುವುದು ಅತ್ಯಂತ ಸುಲಭ ಎಂದು ರಾಜ್ಯ ಬಿಜೆಪಿ ಸಹವಕ್ತಾರ ರಘು ಕೌಟಿಲ್ಯ ಕಿಡಿಕಾರಿದ್ದಾರೆ.boneless-tongue-Hypothetical-charges-Doing-Easy-Yathnal-opposite-Raghu Kautilya-Spark

ಜನಮನದ ಹೃದಯ ಗೆದ್ದಿರುವ ಬಿ.ಜೆ.ವಿಜಯೇಂದ್ರ ಅವರ ಹೆಸರು ಕೇಳಿದರೆ ದುಸ್ವಪ್ನಕಂಡಂತೆ ಬಡಬಡಿಸುತ್ತಿರುವಿರಲ್ಲ, ಎಲುಬಿಲ್ಲದ ನಾಲಿಗೆಯಲ್ಲಿ ಕಪೋಲಕಲ್ಪಿತ ಆರೋಪಗಳನ್ನು ಮಾಡುವುದು ಅತ್ಯಂತ ಸುಲಭ ಎಂದು ತಿಳಿದಿರುವಂತಿದೆ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.boneless-tongue-Hypothetical-charges-Doing-Easy-Yathnal-opposite-Raghu Kautilya-Sparkಪ್ರಚಾರ ಹುಚ್ಚು ನಿಮ್ಮನ್ನು ತಲೆತಿರುಗಿಸಿದಂತಿದೆ

ನಿಮ್ಮ ಮಾತುಗಳನ್ನು ವ್ಯಕ್ತಿಗತ ತೇಜೋವಧೆಗೆ ಮೀಸಲಿಟ್ಟಂತಿದೆ. ವಿಜಯೇಂದ್ರ ಅವರ ಹೆಸರು ಹೇಳಿದರೆ ಅತಿ ಹೆಚ್ಚು ಪ್ರಚಾರ ದೊರೆಯತ್ತದೆ ಎಂಬ ಹುಚ್ಚು ನಿಮ್ಮನ್ನು ತಲೆತಿರುಗಿಸಿದಂತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : boneless-tongue-Hypothetical-charges-Doing-Easy-Yathnal-opposite-Raghu Kautilya-Spark