ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಸ್ವಂತ ಭೂಮಿ ದಾನ ಮಾಡಿದ ಬಿಎಂಟಿಸಿ ಅಧ್ಯಕ್ಷ  ಎನ್ ಎಸ್ ನಂದೀಶ್ ರೆಡ್ಡಿ…

Promotion

ಬೆಂಗಳೂರು,ನವೆಂಬರ್,6,2020(www.justkannada.in): ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಮಾಜಿ ಶಾಸಕ ಹಾಗೂ ಬಿಎಂಟಿಸಿ ಅಧ್ಯಕ್ಷ  ಎನ್ ಎಸ್ ನಂದೀಶ್ ರೆಡ್ಡಿ ಸ್ವಂತ ಭೂಮಿ ದಾನ ಮಾಡಿದ್ದಾರೆ.BMTC- chairman- NS Nandish Reddy-donated -land - construction - veterinary clinic.

ಬೆಂಗಳೂರಿನ ದೊಡ್ಡ ನೆಕ್ಕುಂದಿ ಗ್ರಾಮದಲ್ಲಿ  ಪಶು ಚಿಕಿತ್ಸಾಲಯ ನಿರ್ಮಾಣಕ್ಕಾಗಿ 2.5ಕೋಟಿ ರುಪಾಯಿ ಮೌಲ್ಯದ ತಮ್ಮ ಸ್ವಂತ ಭೂಮಿಯನ್ನ ನಂದೀಶ್ ರೆಡ್ಡಿ  ದಾನ ಮಾಡಿದ್ದಾರೆ. ಈ ಸಂಬಂಧ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಗೆ  40/60 ಭೂಮಿಯನ್ನ ನಂದೀಶ್ ರೆಡ್ಡಿ ಹಸ್ತಾಂತರ ಮಾಡಿದ್ದಾರೆ.BMTC- chairman- NS Nandish Reddy-donated -land - construction - veterinary clinic.

ದೊಡ್ಡ ನೆಕ್ಕುಂದಿ ಪಶುಚಿಕಿತ್ಸಾಲಯ  ಕಟ್ಟಡದ ಸ್ಥಳದಲ್ಲಿ  ಬಹಳ ವರ್ಷಗಳ ಹಿಂದೆ ಬಸವಣ್ಣ ದೇವರ ದೇವಸ್ಥಾನವಿದ್ದು  ತದನಂತರ ಆಸ್ಥಳದಲ್ಲಿ ಪಶು ಚಿಕಿತ್ಸಾಲಯ  ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈಗಿರುವ ಸ್ಥಳದಲ್ಲಿ ಬಸವಣ್ಣ ದೇವರ ಮಂದಿರ ಪುನರ್ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.BMTC- chairman- NS Nandish Reddy-donated -land - construction - veterinary clinic.

ಹೀಗಾಗಿ ಹೊಸ ಪಶು ಚಿಕಿತ್ಸಾಲಯ ನಿರ್ಮಾಣಕ್ಕಾಗಿ ಬಿಎಂಟಿಸಿ ಅಧ್ಯಕ್ಷ  ಎನ್ ಎಸ್ ನಂದೀಶ್ ರೆಡ್ಡಿ ಸ್ವಂತ ಸ್ಥಳವನ್ನ ದಾನ ಮಾಡಿದ್ದಾರೆ.

Key words: BMTC- chairman- NS Nandish Reddy-donated -land – construction – veterinary clinic.