ಆಸ್ತಿ ದತ್ತಾಂಶಕ್ಕೆ ಬ್ಲಾಕ್‌ಚೇನ್ ಬಳಕೆ: ಶೀಘ್ರದಲ್ಲೇ ಪ್ರಯೋಗ

 

ಬೆಂಗಳೂರು, ಅಕ್ಟೋಬರ್ ೧, ೨೦೨೧ (www.justkannada.in news ): ರಾಜ್ಯ ಸರ್ಕಾರದ ಆನ್‌ಲೈನ್ ಆಸ್ತಿ ದಾಖಲೆ ನಿರ್ವಹಣೆಗಾಗಿ ಬ್ಲಾಕ್‌ಚೇನ್ ತಂತ್ರಜ್ಞಾನ-ಆಧಾರಿತ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಈ ಪ್ರಯತ್ನ ಈಗ ಕೈಗೂಡಿದ್ದು, ಇನ್ನೊಂದು ವಾರದಲ್ಲಿ ಹೊಸ ವ್ಯವಸ್ಥೆಗೆ ಚಾಲನೆ ದೊರೆಯಲಿದೆ.

ಕಂದಾಯ ಇಲಾಖೆಯ ಅಧಿಕಾರಿಗಳ ಪ್ರಕಾರ ಆರಂಭದಲ್ಲಿ ಸರ್ಕಾರ ಈ ಹೊಸ ವ್ಯವಸ್ಥೆಯನ್ನು ರಾಜ್ಯದ ಎರಡು ಉಪನೋಂದಣಾಧಿಕಾರಿಗಳ ಕಚೇಗಳಲ್ಲಿ ಪ್ರಾಯೋಗಿಕವಾಗಿ ಬಳಸಲಿದೆ. ಅವುಗಳೆಂದರೆ ತುಮಕೂರಿನ ಗುಬ್ಬಿ ಉಪನೋಂದಣಾಧಿಕಾರಿ ಕಚೇರಿ ಹಾಗೂ ಇನ್ನೊಂದು ದಾವಣಗೆರೆಯ ಜಗಳೂರು ಉಪನೋಂದಣಾಧಿಕಾರಿ ಕಚೇರಿ. ಒಮ್ಮೆ ಈ ಪ್ರಯೋಗ ಯಶಸ್ವಿಯಾದರೆ ಅದನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುತ್ತದೆ.

ಈ ಕುರಿತು ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ-ಆಡಳಿತ) ರಾಜೀವ್ ಚಾವ್ಲಾ ಅವರು, “ಇದರ ಸಾಫ್ಟ್ವೇರ್ ಸಿದ್ಧವಾಗಿದ್ದು, ಭದ್ರತಾ ಅಂಶಗಳ ಕುರಿತಾದ ಪರಿಶೀಲನೆಯೂ ಸಿದ್ಧವಿದೆ. ಇನ್ನು ಏಳರಿಂದ ಹತ್ತು ದಿನಗಳ ಒಳಗಾಗಿ ಸರ್ಕಾರಿ ಇದನ್ನ ಪ್ರಯೋಗಿಸಲಿದೆ,” ಎಂದು ವಿವರಿಸಿದರು.

ಆನ್‌ಲೈನ್ ಆಸ್ತಿ ದತ್ತಾಂಶ ಕ್ರೋಢೀಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಬ್ಲಾಕ್‌ಚೇನ್ ಆಧಾರಿತ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸುತ್ತಿರುವ ಕುರಿತು ಜನವರಿಯಲ್ಲಿ ಪ್ರಕಟವಾಗಿತ್ತು. ಐಐಟಿ-ಕಾನ್ಪುರ್‌ನ ಸಂಯೋಜನೆಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಹೊಸ ವ್ಯವಸ್ಥೆ ಆಸ್ತಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಯಾರೂ ಸಹ ನಾಶಪಡಿಸದಿರುವಂತೆ ಅಥವಾ ದುರುಪಯೋಗ/ ಕಳ್ಳತನವಾಗದಿರುವಂತೆ ಖಾತ್ರಿಪಡಿಸುತ್ತದೆ. ಈ ದತ್ತಾಂಶದ ಎಲೆಕ್ಟ್ರಾನಿಕ್ ಶೇಖರಣಾ ವ್ಯವಸ್ಥೆಯು ಬಳಕೆದಾರರಿಗೆ ಒಂದು ಭದ್ರತಾ ಪಿನ್ (security pin) ಮೂಲಕ ದತ್ತಾಂಶವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಆಸ್ತಿಗಳ ಮಾಹಿತಿ ಯಾವುದೇ ಕಾರಣಕ್ಕೂ, ಯಾವುದೇ ರೀತಿಯಲ್ಲಿಯೂ ಸೋರಿಕೆ ಆಗದಿರುವುದನ್ನು ಖಾತ್ರಿಪಡಿಸುವ ಸಲುವಾಗಿ ಈ ಹೊಸ ಬ್ಲಾಕ್‌ಚೇನ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.

ಕಂದಾಯ ಇಲಾಖೆಯ ದತ್ತಾಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಆಸ್ತಿ ನೋಂದಣಿ ಹಾಗೂ ದಾಖಲಾತಿಗೆ ಸಂಬಂಧಪಟ್ಟ ದತ್ತಾಂಶವನ್ನು ಬದಲಾಯಿಸುವ, ಕದಿಯುವ ಅಥವಾ ಮೋಸ ಮಾಡುವ ಕನಿಷ್ಠ ೧೫ ಪ್ರಕರಣಗಳು ನಡೆದಿದ್ದವಂತೆ.

CYBER ALERT- MINISTRY OF HOME AFFAIRS-Computer Emergency Response Team-cyber offensive attack- from the -Chinese Army.

ಬ್ಲಾಕ್‌ಚೇನ್ ತಂತ್ರಜ್ಞಾನ ಎಂದರೇನು?

ಬ್ಲಾಕ್‌ಚೇನ್ ತಂತ್ರಜ್ಞಾನವನ್ನು ತುಂಬ ಸರಳವಾಗಿ ಹೇಳುವುದಾದರೆ, ಇದೊಂದು ಎಲ್ಲರಿಗೂ ಲಭ್ಯವಿರುವ ಲೆಡ್ಜರ್ (ಖಾತೆ ಪುಸ್ತಕ), ಅಥವಾ ತಂತ್ರಜ್ಞಾನ ಪರಿಭಾಷೆಯಲ್ಲಿ ದತ್ತಾಂಶ. ಅದರರ್ಥ ಎಲ್ಲರಿಗೂ ಮುಕ್ತವಾಗಿ ದೊರೆಯುತ್ತದೆ ಎಂದಲ್ಲ. ಬ್ಲಾಕ್‌ಚೈನ್‌ಗೆ ಒಳಪಟ್ಟ ಸದಸ್ಯರಿಗೆ ಇದು ಮುಕ್ತ. ಬ್ಲಾಕ್ ಚೈನ್ ಎಂಬ ಹೆಸರೇ ಎಲ್ಲವನ್ನೂ ಸೂಚಿಸುತ್ತದೆ; ಇದು ಬ್ಲಾಕ್‌ಗಳ ಸರಪಳಿ.

ಭೂ ನೋಂದಣಿಗೆ ಸಹಕಾರಿ

ಬ್ಲಾಕ್‌ಚೇನ್‌ನ ಪ್ರಮುಖ ಉಪಯೋಗಗಳಲ್ಲಿ ಇದು ಒಂದು. ಭೂಮಿ, ಕಾರು, ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ದಾಖಲೆ ಪತ್ರಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಹಾಗೆಯೇ, ಕಾಗದದ ದಾಖಲೆ ಪತ್ರಗಳ ನಿರ್ವಹಣೆ ಗೊಂದಲಯಮವೂ ಆಗಿರುತ್ತದೆ. ಇದರಿಂದಾಗಿ ಅನೇಕ ಪ್ರಮಾದಗಳಾಗುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಬ್ಲಾಕ್‌ಚೇನ್ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಆಸ್ತಿ ನೋಂದಣಿ, ಹೆಸರು ಬದಲಾವಣೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಬ್ಲಾಕ್‌ಚೇನ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ ಮತ್ತು ಇದು ಪಾರದರ್ಶಕವಾಗಿರುತ್ತದೆ. ಒಮ್ಮೆ ಸಂಗ್ರಹವಾದರೆ ಮತ್ತೆ ಅದನ್ನು ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : block chain-for-property-data-pilot-launch-soon