ಕೋಮಲ್’ಗೆ ಕೋವಿಡ್ ಹಾಗೂ ರಾಯರ ಪವಾಡ ಕುರಿತ ಜಗ್ಗೇಶ್ ಸರಣಿ ಟ್ವೀಟ್!

Promotion

ಬೆಂಗಳೂರು, ಏಪ್ರಿಲ್ 28, 2021 (www.justkannada.in): ನಟ ಕೋಮಲ್ ಗೆ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಅವರ ಸಹೋದರ ಜಗ್ಗೇಶ್ ತಡವಾಗಿ ಬಹಿರಂಗಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಗುರುರಾಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ರಾಯರ ಪವಾಡದಿಂದ ತಮ್ಮ ಬದುಕಿದ ಎಂದಿರುವ ಕೋಮಲ್​ ಕೊರೋನಾ ಗೆದ್ದ ಸತ್ಯ ಬಿಚಿಟ್ಟಿದ್ದಾರೆ.

ಕೋಮಲ್​ ಕೂಡ ಸೋಂಕಿಗೆ ತುತ್ತಾಗಿ, ಸಾವು ಬದುಕಿನ ಹೋರಾಟದಿಂದ ಗೆದ್ದಿದ್ದಾರೆ. ತಮ್ಮ ಹೇಗೆ ಕೋವಿಡ್​ ಗೆದ್ದು ಬಂದ ಎಂಬ ಕಥೆಯನ್ನು ನಟ ಜಗ್ಗೇಶ್​ ಟ್ವೀಟರ್​ ಮೂಲಕ ಹಂಚಿಕೊಂಡಿದ್ದಾರೆ.

ಆಕ್ಸಿಜನ್​ ಮಟ್ಟ 80ಕ್ಕೆ ಇಳಿದ ಆತ ರಾಯರ ಆಶೀರ್ವಾದದಿಂದ ಈಗ ಗುಣಮುಖನಾಗಿದ್ದಾನೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.