ಭಾರತದ ಸಂಕಷ್ಟ ಕಂಡು ಮರುಗಿದ ಬ್ರೆಟ್ ಲೀ: ಆರ್ಥಿಕ ನೆರವು ನೀಡಿದ ಆಸಿಸ್ ಕ್ರಿಕೆಟಿಗ

ಬೆಂಗಳೂರು, ಏಪ್ರಿಲ್ 28, 2021 (www.justkannada.in): ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ತತ್ತಸಿರುವ ಭಾರತಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಆರ್ಥಿಕ ಸಹಾಯ ನೀಡಿದ್ದಾರೆ.

ಕೊರೊನಾ ಸೋಂಕಿತರಿಗೆ ಭಾರತದಾದ್ಯಂತ‌ ಆಸ್ಪತ್ರೆಗಳಿಗೆ ಆಕ್ಸಿಜನ್ ನೀಡಲು ಬಿಟ್ ಕಾಯಿನ್ ಸಹಾಯ ಮಾಡಿದ್ದಾರೆ.‌

ಜತೆಗೆ ಭಾರತದ ಸಂಕಷ್ಟ ಪರಿಸ್ಥಿತಿ ಕಂಡು ಮರುಗಿರುವ ಬ್ರೆಟ್ ಲೀ ಟ್ವಿಟ್ಟರ್ ನಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.

ಭಾರತ ನನಗೆ ಎರಡನೇ ಮನೆ ಇದ್ದಂತೆ. ಈ ದೇಶದಲ್ಲಿ ಪಡೆದ ಪ್ರೀತಿ ಮತ್ತು ಅಭಿಮಾನವನ್ನು ಮರೆಯುವಂತಿಲ್ಲ ಎಂದು ಸ್ಮರಿಸಿದ್ದಾರೆ.