ಮೈಸೂರಿಗೂ ಕಾಲಿಟ್ಟ ಬ್ಲ್ಯಾಕ್ ಫಂಗಸ್: ಕೋವಿಡ್ ಗೆ ಇಬ್ಬರು ಕೊರೋನಾ ವಾರಿಯರ್ಸ್ ಬಲಿ…

Promotion

ಮೈಸೂರು,ಮೇ,19,2021(www.justkannada.in):  ಕೊರೋನಾದಿಂದ ಗುಣಮುಖರಾದವರಿಗೆ ಇದೀಗ ಬ್ಲ್ಯಾಕ್ ಫಂಗಸ್ ಕಂಡು ಬರುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಈ ಬ್ಬ್ಲ್ಯಾಕ್ ಫಂಗಸ್  ಇದೀಗ ಸಾಂಸ್ಕೃತಿಕ ನಗರಿ ಮೈಸೂರಿಗೂ ಕಾಲಿಟ್ಟಿದೆ.jk

ಮೈಸೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಈ ನಡುವೆ ಇಬ್ಬರು ಕೊರೊನಾ ವಾರಿಯರ್ಸ್ ಗಳು ಕೋವಿಡ್ ಗೆ ಬಲಿಯಾಗಿದ್ದಾರೆ.  ವಿನೋದ್ (28) ರವಿ (38) ಮೃತಪಟ್ಟ ಕೊರೋನಾ ವಾರಿಯರ್ಸ್ ಗಳು. ಮೃತಪಟ್ಟ ಇಬ್ಬರು ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆ ನೌಕರರಾಗಿದ್ದಾರೆ.

ರವಿ ಎಂಬುವವರಿಗೆ ಕೊರೋನಾದ ಜತೆಗೆ ಬ್ಲ್ಯಾಕ್ ಫಂಗಸ್ ಇತ್ತು ಎನ್ನಲಾಗಿದೆ. ರವಿ ಕೋವಿಡ್ ಮೃತ ದೇಹ ಸಾಗಿಸುವ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ  ರವಿ ಅವರಿಗೆ 16 ದಿನದ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.black-fungus-mysore-covid-death-two-corona-warriors

ಈ ನಡುವೆ ರವಿ ಅವರಿಗೆ ಕೋವಿಡ್ ನಂತರ  ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ಶಸ್ತ್ರಚಿಕಿತ್ಸೆ ಸಹ ಮಾಡಲಾಗಿತ್ತು. ಆದರೆ ರವಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇನ್ನು ವಿನೋದ್ ಫಾಗಿಂಗ್ ವಾಹನದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಮೂರು ದಿನದ‌ ಹಿಂದೆ ಸೋಂಕು‌ ದೃಢವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇವರು ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Key words: Black fungus – Mysore-covid –death-two -Corona Warriors.