ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಭಾರಿ ಮುನ್ನಡೆ…

Promotion

ಕೋಲಾರ,ಮೇ,23,2019(www.justkannada.in):  ಲೋಕಸಮರದ ಫಲಿತಾಂಶ ಹೊರ ಬೀಳುತ್ತಿದ್ದು ಎನ್ ಡಿಎ ಬಾರಿ ಮುನ್ನಡೆ ಸಾಧಿಸಿದೆ. ಎನ್ ಡಿಎ ಈ ಬಾರಿ ಸರಳ ಬಹುಮತದೊಂದಿದೆ ದೇಶದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಇನ್ನು ರಾಜ್ಯದಲ್ಲೂ ಹಲವು ಕ್ಷೇತ್ರಗಳಲ್ಲಿ ಕಮಲ ಪಾಳಯ ಮುನ್ನುಗ್ಗುತ್ತಿದೆ. ತುಮಕೂರು ಕ್ಷೇತ್ರದಲ್ಲಿ 4ನೇ ಸುತ್ತಿನಲ್ಲೂ ಹೆಚ್.ಡಿ ದೇವೇಗೌಡರಿಗೆ ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿ  14 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ38,291 ಮತಗಳ ಮುನ್ನಡೆ ಸಾಧಿಸಿದ್ದು. ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಬಾರಿ ಹಿನ್ನಡೆ ಉಂಟಾಗಿದೆ. ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿ ಮುನಿಯಪ್ಪಗೆ ಬಾರಿ ಹಿನ್ನಡೆಯಾಗಿದ್ದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಗೆ 82 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿದ್ದಾರೆ.

Key words: BJP’s candidates in Kolar and Chikkaballapur are a huge lead.

#Election2019  #result