ಬಿಜೆಪಿ ಗೆಲುವು: ಅಧಿಕಾರ ದುರ್ಬಳಕೆ, ಹಣ ಕೆಲಸ ಮಾಡಿದೆ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ…

Promotion

ಬಾಗಲಕೋಟೆ,ನವೆಂಬರ್,10,2020(www.justkannada.in): ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದರಲ್ಲಿ ಅಧಿಕಾರದ ದುರ್ಬಳಕೆ, ಹಣ ಕೆಲಸ ಮಾಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

BJP wins-by election-Former CM Siddaramaiah - abuse - power – money-worked
siddaramaih#profile..

ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಾಮಾನ್ಯ. ಶಿರಾ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಇನ್ನು ಆರ್.ಆರ್ ನಗರದಲ್ಲಿ  ಫೈಟ್ ಕೊಡ್ತೇವೆ ಎಂದು ಕೊಂಡಿದ್ದವು. ಆದರೇ ಇಲ್ಲಿ ಅಧಿಕಾರ ದುರ್ಬಳಕೆ ಹಣದ ಹೊಳೆ ಹರಿಸಿ ಬಿಜೆಪಿ ಗೆದ್ದಿದ್ದಾರೆ.  ಏನೇ ಆದರೂ ಜನರ ತೀರ್ಪನ್ನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.

ಜೆಡಿಎಸ್ ಡಮ್ಮಿ ಕ್ಯಾಂಡಿಡೇಟ್ ಹಾಕಿದೆ…

ಆರ್.ಆರ್ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡ ರೀತಿ ಕಾಣಿಸುತ್ತದೆ. ಹೀಗಾಗಿ ಜೆಡಿಎಸ್ ಡಮ್ಮಿ ಕ್ಯಾಂಡಿಡೇಟ್ ಹಾಕಿದೆ ಎಂದು ಸಿದ್ಧರಾಮಯ್ಯ ಜೆಡಿಎಸ್ ನಾಯಕರಿಗೆ ಚಾಟಿ ಬೀಸಿದರು.

Key words: BJP wins-by election-Former CM Siddaramaiah – abuse – power – money-worked