ಯಡಿಯೂರಪ್ಪ ಅವರ ಕಣ್ಣೀರಿನಲ್ಲೇ ಬಿಜೆಪಿ ಕೊಚ್ಚಿ ಹೋಗುತ್ತೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

Promotion

ವಿಜಯಪುರ, ಅಕ್ಟೋಬರ್,23,2021(www.justkannada.in):  ಸಿಂದಗಿ, ಹಾನಗಲ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಮೂರು ಪಕ್ಷದ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪ, ಟಾಕ್ ವಾರ್ ಮೂಲಕ ತಮ್ಮತ್ತ ಮತದಾರರನ್ನ ಸೆಳೆಯಲ್ಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಈ ನಡುವೆ ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಎಸ್ ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಗೆ ವರವಾಗುವುದಿಲ್ಲ. ಯಡಿಯೂರಪ್ಪ ಅವರ ಕಣ್ಣೀರಿನಲ್ಲೇ ಬಿಜೆಪಿ ಕೊಚ್ಚಿ ಹೋಗುತ್ತೆ ಎಂದು ಲೇವಡಿ ಮಾಡಿದರು.

ಹಾಗೆಯೇ ಕಾಂಗ್ರೆಸ್ ಅಡ್ರಸ್ ಇಲ್ಲದ ಹಾಗೆ ಆಗುತ್ತೆ ಎಂದಿದ್ದ ಮಾಜಿ ಸಿಎಂ ಬಿಎಸ್ ವೈಗೆ ಟಾಂಗ್ ನೀಡಿದ ಡಿ.ಕೆ ಶಿವಕುಮಾರ್, ಬಿಎಸ್ ಯಡಿಯೂರಪ್ಪನ ಅಡ್ರೆಸ್ ಎಲ್ಲಿದೆ ಎಂದು ಅವರೇ ಹೇಳಬೇಕು ಎಂದು ಟಾಂಗ್ ನೀಡಿದರು.

Key words: BJP – tears –Yeddyurappa- KPCC President -DK Sivakumar.