ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಸರ್ಕಾರ ರಚನೆ ವಿಚಾರ: ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಸೂಚನೆ…..

Promotion

ನವದೆಹಲಿ,ನ,26,2019(www.justkannada.in):  ಮಹಾರಾಷ್ಟ್ರದಲ್ಲಿ ಬಿಜೆಪಿ- ಎನ್ ಸಿಪಿ  ಸರ್ಕಾರ ರಚನೆ ವಿಚಾರಕ್ಕೆ ಸಂಬಂಧ ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ ಸಿಎಂ ದೇವೇಂದ್ರ ಪಡ್ನಾವೀಸ್ ಗೆ ಸೂಚನೆ ನೀಡಿದೆ.

ಮಹಾರಾಷ್ಟ್ರ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಶಿವಸೇನೆ-ಎನ್​​ಸಿಪಿ-ಕಾಂಗ್ರೆಸ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಇಂದು  ತೀರ್ಪು ಇಂದು ಪ್ರಕಟಿಸಿದೆ. ಸೋಮವಾರ ವಾದ – ಪ್ರತಿವಾದ ಆಲಿಸಿದ್ದ ಜಸ್ಟೀಸ್​ ಎನ್​​.ವಿ ರಮಣ್ ನೇತೃತ್ವದ ಪೀಠ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಇಂದು 10.30ಕ್ಕೆ ಪ್ರಕಟ ಮಾಡಿದ್ದಾರೆ.

ನಾಳೆ ಸಂಜೆ 5 ಗಂಟೆ ಒಳಗೆ ಬಹುಮತ ಸಾಬೀತು ಪಡಿಸಬೇಕು.  ಇದೇ ವೇಳೆ ನ್ಯಾಯಾಪೀಠ ಬಹುಮತ ಸಾಬೀತು ಮಾಡುವ ವೇಳೆ ಗುಪ್ತಮತದಾನವಾಗಬಾರದು. ಬಹುಮತ ಸಾಬೀತು ಪ್ರಕ್ರಿಯೆ ನೇರಪ್ರಸಾರವಾಗಬೇಕು. ಮತ್ತು ಗುಪ್ತಮತದಾನವಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಹಾಗೆಯೇ ಹಂಗಾಮಿ ಸ್ಪೀಕರ್ ನೇಮಕ ಮಾಡಬೇಕು. ನಾಳೆ ಬೆಳಿಗ್ಗೆಯಿಂದ ಸಂಜೆ 5 ರೊಳಗೆ ಶಾಸಕರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ನಡೆಯಬೇಕು ನಂತರ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Key words: BJP –NCP-government – Maharashtra- Supreme Court – tomorrow- Prove majority