ಸರ್ಕಾರ, ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ- ನಳೀನ್ ಕುಮಾರ್ ಕಟೀಲ್ ಖಡಕ್ ವಾರ್ನಿಂಗ್.

ಬೆಂಗಳೂರು,ಜನವರಿ,25,2022(www.justkannada.in): ಸರ್ಕಾರ ಮತ್ತು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾರು ಬಹಿರಂಗವಾಗಿ ಮಾತನಾಡುವಂತಿಲ್ಲ ಎಂದು ಬಿಜೆಪಿ ಶಾಸಕರು ಮತ್ತು ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಂಪುಟ ವಿಸ್ತರಣೆ, ಸರ್ಕಾರದ ಬಗ್ಗೆ ಯಾರೂ ಮಾತನಾಡಬಾರದು. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಬಿಜೆಪಿಯಲ್ಲಿ ಎಲ್ಲರೂ ಶಿಸ್ತು ಅನುಸರಿಸಬೇಕು. ಸಿಎಂ, ಅಧ್ಯಕ್ಷರು ಶಾಸಕರಿಗೆ ಬೇರೆ ಶಿಸ್ತು ಅಂತಾ ಇಲ್ಲ.  ಯಾರೂ ಬಹಿರಂಗ ಹೇಳಿಕೆಯನ್ನ ನೀಡಬಾರದು. ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಬಹಿರಂಗವಾಗಿ ಮಾತನಾಡುವವರ ಜತೆ ಮಾತನಾಡುತ್ತೇನೆ  ಶಿಸ್ತು ಸಮಿತಿ ಮೂಲಕ ಕೇಂದ್ರಕ್ಕೆ ವರದಿ ಕಳಿಹಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂಬ ಸಿದ್ಧರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ನಳೀನ್ ಕುಮಾರ್ ಕಟೀಲ್, ಬಿಎಸ್ ವೈ, ಸಿಎಂ ಬೊಮ್ಮಾಯಿ ಆಡಳಿತ ನೋಡಿ ಕಾಂಗ್ರೆಸ್ ಜೆಡಿಎಸ್ ನಾಯಕರೇ ಬಿಜೆಪಿಗೆ ಸೇರಲು ಮುಂದೆ ಬಂದಿದ್ದಾರೆ.   ಕಾಂಗ್ರೆಸ್ ನಾಯಕರು  ಪ್ರಚಲಿತ ರಾಜಕೀಯದಲ್ಲಿ ಭಯಭೀತರಾಗಿದ್ದಾರೆ ಎಂದು ಲೇವಡಿ ಮಾಡಿದರು.

Key words: bjp-nalin kumar katil-warning