ನಾವು 17 ಜನ ಬಿಜೆಪಿಗೆ ಬಂದಿದ್ದು ಬಿಎಸ್ ವೈ ಲಿಂಗಾಯಿತರು ಅಂತಲ್ಲ ಸ್ವಾಮಿ- ಮಠಾಧೀಶರಿಗೆ ಟಾಂಗ್ ನೀಡಿದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್.

ಮೈಸೂರು,ಜುಲೈ,21,2021(www.justkannada.in):  ಸಿಎಂ ಬದಲಾವಣೆ ವಿಚಾರ ಚರ್ಚೆಗೆ  ಬಂದ ಬೆನ್ನಲ್ಲೆ ರಾಜ್ಯದ ವಿವಿಧ ಮಠಾಧೀಶರು ಸಿಎಂ ಬಿಎಸ್ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದು ಬಿಜೆಪಿ ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡಿದ್ದಾರೆ.jk

ಈ ನಡುವೆ  ಖಾವಿಧಾರಿಗಳ ನಡೆಯನ್ನ ಕಟುವಾಗಿ ಟೀಕಿಸಿದ  ಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಮೈಸೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಿಷ್ಟು…

ಮಠಮಾನ್ಯಗಳು ರಾಜಕೀಯ ಕೇಂದ್ರಗಳಲ್ಲ. ಮಠಗಳ ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕು. ಅದರ ವಿನಹ ರಾಜಕೀಯದ, ಅಧಿಕಾರದ ಭಾಗವಾಗಬಾರದು. ಧರ್ಮಾಧ್ಯಕ್ಷರು ಒಂದು ಪಕ್ಷದ ಪರವಾಗಿ, ಒಬ್ಬ ವ್ಯಕ್ತಿಯು ಪರವಾಗಿ ನಿಲ್ಲಬಾರದು. ಮಠಾಧೀಶರನ್ನ ಬೀದಿಗೆ ತಂದು ತಮ್ಮ ತಮ್ಮ ಬಗ್ಗೆ ಒಲವು ಮೂಡಿಸೋದು ತಪ್ಪು. ಕನ್ನಡನಾಡು ಸರ್ವಧರ್ಮದ ಸಂಗಮ. ರಾಜಕಾರಣವನ್ನು ರಾಜಕಾರಣಿಗಳಿಗೆ ಬಿಡಿ. ಧರ್ಮದಲ್ಲಿ ರಾಜಕಾರಣ ಇರಬಾರದು, ರಾಜಕಾರಣದಲ್ಲಿ ಧರ್ಮ ಇರಬೇಕು ಎಂದು ಸಲಹೆ ನೀಡಿದರು.

ಕಳೆದ 10ವರ್ಷದ ಹಿಂದೆ ಭದ್ರಾವತಿಯಲ್ಲಿ ಸರ್ವಧರ್ಮ ಸಭೆ ನಡೆದಿತ್ತು. ನಾನು ಅಲ್ಲಿ ಹೋಗಿದ್ದೆ, ಎಲ್ಲರನ್ನೂ ಪ್ರಶ್ನೆ ಮಾಡಿದ್ದೆ. ಭಾರತದ ಸಂವಿಧಾನವನ್ನ ಎಷ್ಟು ಜನ ಓದಿದ್ದೀರಿ ಎಂದು ಕೇಳಿದ್ದೆ. ನಾನೇ 50 ಸಂವಿಧಾನದ ಪುಸ್ತಕಗಳನ್ನು ಹಂಚಿದ್ದೆ. ಸಾರ್ವಭೌಮ ಸದನವಾದ ಅಸೆಂಬ್ಲಿ ಸಂವಿಧಾನದ ಅಡಿಯಲ್ಲಿ ಬರೋದು. ಧರ್ಮಾಧಿಕಾರಿಗಳು ಸಂವಿಧಾನಕ್ಕಿಂತ ನಾವು ಸಾರ್ವಭೌಮ ಅನ್ನೊದು ಸರಿಯಲ್ಲ. ಇಲ್ಲಿ ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದು ಸಿಎಂ ಪರ ನಿಂತ ಮಠಾಧೀಶರಿಗೆ ಟಾಂಗ್ ನೀಡಿದರು.

ನಾವು 17 ಜನ ಬಂದ್ವಿ ಬಿಜೆಪಿಗೆ, ನಾವು ಲಿಂಗಾಯಿತರಲ್ಲ ಸ್ವಾಮಿ…

ನಾವು 17 ಜನ ಬಿಜೆಪಿಗೆ ಬಂದವು.  ನಾವು ಲಿಂಗಾಯಿತರಲ್ಲ ಸ್ವಾಮಿ. ಬಿಎಸ್ ಯಡಿಯೂರಪ್ಪ ಲಿಂಗಾಯಿತರು ಎಂದು ಬಿಜೆಪಿಗೆ ಬರಲಿಲ್ಲ.  ನಾವು ಯಡಿಯೂರಪ್ಪ ಅವರನ್ನ ಜಾತಿಯಿಂದ ನೋಡಲಿಲ್ಲ.. ಹೋರಾಟಗಾರ ಅಂತಾ ಪಕ್ಷಕ್ಕೆ ಬಂದೆವು ಎಂದು ಮಠಾಧೀಶರಿಗೆ ಹೆಚ್.ವಿಶ್ವನಾಥ್ ತಿರುಗೇಟು ನೀಡಿದರು.

ಯಡಿಯೂರಪ್ಪ ಅವರು ಎರಡು ಬಾರಿ ಮುಖ್ಯಮಂತ್ರಿ ಆದ್ರಿ. ಪರಿಸ್ಥಿತಿಯ ಶಿಶುವಾಗಿ ನಿಂತ್ರಿ. ಕುಟುಂಬವರ್ಗದವರ ಸ್ವಯಂಕೃತ ಅಪರಾಧದಿಂದ ಜೈಲು ಪಾಲಾದ್ರಿ. ಬಿಜೆಪಿ ಯಡಿಯೂರಪ್ಪ ಅವ್ರನ್ನ 6 ವರ್ಷಗಳ ಕಾಲ ಸಸ್ಪೆಂಡ್ ಮಾಡಿತ್ತು. ಆ ವೇಳೆ ಮಠಾಧೀಶರು ಯಡಿಯೂರಪ್ಪ ಪರ ನಿಲ್ಲಲಿಲ್ಲ. ಕೆಜೆಪಿ ಕಟ್ಟಿದಾಗಲೂ ಮಠಾಧೀಶರು ಬರಲಿಲ್ಲ. 48 ಇದ್ದದ್ದು 104 ಆಯ್ತು, ಅದು ಮೋದಿಯಿಂದ. ಮೋದಿಯವರ ತತ್ವ ಸಿದ್ದಾಂತಕ್ಕೆ ವಿರುದ್ಧವಾಗಿ ಇವತ್ತಿನ ಸರ್ಕಾರ ನಡೆಯುತ್ತಿದೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಅವರಲ್ಲ ಎ.ಕೆ. ಸುಬ್ಬಯ್ಯ.

ಬಿಎಸ್ ವೈ ವಾಗ್ದಾಳಿ ಮುಂದುವರೆಸಿದ ಹೆಚ್.ವಿಶ್ವನಾಥ್, ಎರಡು ಬಾರಿ ಹೋರಾಟಗಾರನ ಕೈಗೆ ಅಧಿಕಾರ ಸಿಕ್ಕಾಗ ಏನಾಯ್ತು.? ಜೈಲಿಗೆ ಯಾಕೆ ಹೋಗಿದ್ರಿ. ನಾಲಿಗೆಗೆ ನಡೆಯೋ ನಾಯಕ ಯಾರಾದರೂ ಇದ್ರೆ ಯಡಿಯೂರಪ್ಪ ಅಂತಾ ಹೇಳ್ತಾ ಇದ್ದವು. ಆದರೆ ಇವತ್ತು ಯಡಿಯೂರಪ್ಪ ತಮ್ಮ ನಾಲಿಗೆ, ಎರಡು ಕೈಗಳನ್ನ ಮಗನಿಗೆ ಕೊಟ್ಟಿದ್ದಾರೆ. ಯಡಿಯೂರಪ್ಪ ಮುನ್ಸಿಪಾರ್ಟಿ ಲೀಡರ್. 1983 ರಲ್ಲಿ ಬಿಜೆಪಿಗೆ ಬಂದವರು. ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಅವರಲ್ಲ ಎ.ಕೆ. ಸುಬ್ಬಯ್ಯ ಎಂದು ತಿಳಿಸಿದರು.

ENGLISH SUMMARY…

All the 17 of us who came to BJP are not Lingayat’s – H. Vishwanath to seers
Mysuru, July 21, 2021 (www.justkannada.in): Following the rumors of change of the leadership in BJP in the State, several seers exhibited their strong support to B.S. Yediyurappa, warning the BJP high command.
Meanwhile, BJP MLC H. Vishwanath has strongly criticized the men in saffron for their move. He addressed a press meet in Mysuru today. “Maths are not centers of politics. The seers should be a part of the society, they should not become part of politics or power. Religious heads should not be biased or should not speak on behalf of anyone person. It is extremely wrong to bring the seers to the streets to show their strength. Karnataka is a very peace-loving, secular state. Hence, I request the seers to leave politics to the politicians. There should be no politics in religion, religion should be in politics,” he said.
“17 of us came to BJP and we are not lingayats. We didn’t come to BJP seeing that BSY belongs to the lingayat community. We didn’t see Yediyrappa’s caste, we came considering that he is a struggler,” he commented.
Keywords: State BJP/ Chief Minister/ B.S. Yediyurappa/ change/ seers/ support/ H. Vishwanath/ Politics/ religion

Key words BJP –mysore- MLC-H.Vishwanath -Tong –CM bs yeddyurappa-support-swamiji’s