ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಬಳಿಕ ಕ್ಷಮೆಯಾಚಿಸಿದ  ಬಿಜೆಪಿ ಶಾಸಕನ ಪತ್ನಿ…

Promotion

ಕಲ್ಬುರ್ಗಿ,ಫೆ,20,2020(www.justkannada.in): ಕಾರ್ಯಕ್ರಮವೊಂದರಲ್ಲಿ ಕಲ್ಬುರ್ಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿ ಜಯಶ್ರಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿರುವ ಘಟನೆ ನಡೆದಿದೆ.

ಶಹಾಬಾದ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್  ಪತ್ನಿ ಜಯಶ್ರೀ ಭಾಷಣ ಮಾಡಿದ ಬಳಿಕ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ. ಬಳಿಕ ಜಯಶ್ರೀ ಅವರು ಕ್ಷಮೆ ಯಾಚಿಸಿದ್ದಾರೆ. ನನ್ನ ಬಾಯಿತಪ್ಪಿನಿಂದ ಜೈಕಾರ ಕೂಗಿದ್ದಕ್ಕೆ ಕ್ಷಮೆ ಕೇಳುತ್ತೇನೆ.  ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿಗರು ಇದ್ದರು. ಹೀಗಾಗಿ ನಾನು ಮರಾಠಿಯಲ್ಲಿ ಮಾತನಾಡಿದೆ. ಕೊನೆಯಲ್ಲಿ  ಬಾಯಿತಪ್ಪಿನಿಂದಾಗಿ ಜೈಮಹಾರಾಷ್ಟ್ರ ಎಂದಿದ್ದೇನೆ. ಇದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಮಹಾರಾಷ್ಟ್ರದಲ್ಲಿ ಜನಿಸಿದ್ದು, ಮನೆಯಲ್ಲಿ ಮರಾಠಿ ಎಲ್ಲಾ ಕಡೆ ಕನ್ನಡದಲ್ಲಿ ಮಾತನಾಡುತ್ತೇನೆ. ಶಹಾಬಾದ್ ಕಾರ್ಯಕ್ರಮದಲ್ಲಿ ಭಾಷಣದ ಕೊನೆಗೆ ಬಾಯಿತಪ್ಪಿ ಜೈ ಮಹಾರಾಷ್ಟ್ರ ಎಂದಿದ್ದೇನೆ ಹೊರತು ಯಾವುದೇ ದುರುದ್ದೇಶದಿಂದ ಆ ರೀತಿ ಹೇಳಿಲ್ಲ ಎಂದು  ಜಯಶ್ರೀ ಹೇಳಿದ್ದಾರೆ.

Key words:  BJP MLA -Wife – shouting -Jai Maharashtra- apologized