“ಬಿಜೆಪಿಯಲ್ಲಿ ಲಾಬಿ ಹೆಚ್ಚಾಗಿದೆ ಅನಿಸುತ್ತಿದೆ” : ಶಾಸಕ ಸತೀಶ್ ರೆಡ್ಡಿ ಆರೋಪ

Promotion

ಬೆಂಗಳೂರು,ಜನವರಿ,13,2021(www.justkannada.in) : .  ಬಿಜೆಪಯಲ್ಲಿ ಲಾಬಿ ಹೆಚ್ಚಾಗಿದೆ ಎಂದು ಅನಿಸುತ್ತಿದೆ. ಅವರ ಮನಗೇಟ್ ಬಳಿಯಿರುವವರಿಗೆ ಮಣೆ ಹಾಕುತ್ತಿದ್ದರೆ. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಇದನ್ನು ಬಿಜೆಪಿ ಹೈಕಮಾಂಡ್ ಕೂಡ ಗಮನಿಸುತ್ತಿದೆ ಎಂದು ಶಾಸಕ ಸತೀಶ್ ರೆಡ್ಡಿ ಆರೋಪ ಮಾಡಿದ್ದಾರೆ.jk-logo-justkannada-mysore

ನನ್ನ ಮಂತ್ರಿ ಮಾಡಿ ಎಂದು ಯಾರ ಮನೆಯ ಬಾಗಿಲಿಗೂ ಹೋಗಿ ಕೇಳಿಲ್ಲ. ಯಾವಾಗ ಮಂತ್ರಿ ಸ್ಥಾನ ಕೊಡುತ್ತಾರೋ ಆವಾಗ ಸ್ವೀಕರಿಸುತ್ತೇನೆ. ಅನಂತಕುಮಾರ್ ಅವರು ಇದ್ದಾಗ ನಮ್ಮ ಸಮಸ್ಯೆ ಆಲಿಸುತ್ತಿದ್ದರು. ಯಡಿಯೂರಪ್ಪ ಅವರ ಬಳಿ ಸಮಸ್ಯೆಗಳನ್ನು ಹೇಳಿಕೊಂಡರು ಪರಿಹಾರ ನೀಡುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. BJP-Lobby-increased-Feeling-Legislator-Satish Reddy-Accused

ಟ್ವೀಟ್ ಮಾಡುವಾಗ ನಾನು ಬಾವುಕನಾಗಿದ್ದೆ. ಹೀಗಾಗಿ, ರೀ ಯಡಿಯೂರಪ್ಪ ಅವರೇ ಎಂದು ಟ್ವೀಟ್ ಮಾಡಿದ್ದೆ. ಬಳಿಕ ರೀ ಎಂಬುದನ್ನು ತೆಗೆದು ಟ್ವೀಟ್ ಮಾಡಿದ್ದೇನೆ. ಪಕ್ಷದಲ್ಲಿ ಯುವಕರಿಗೆ ಅವಕಾಶ ನೀಡಬೇಕು ಎನ್ನುವುದು ನನ್ನ ಅನಿಸಿಕೆ. ಈ ಹಿನ್ನೆಯಲ್ಲಿ ಟ್ವೀಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

key words : BJP-Lobby-increased-Feeling-Legislator-Satish Reddy-Accused