ಇಂದು ಉಡುಪಿಯಲ್ಲಿ ಬಿಜೆಪಿ ಸಂಕಲ್ಪ ಸಮಾವೇಶ: ಸಿಎಂ ಬೊಮ್ಮಯಿಗೆ ಸನ್ಮಾನ.

Promotion

ಉಡುಪಿ,ನವೆಂಬರ್,7,2022(www.justkannada.in):  ಇಂದಿನಿಂದ ಮತ್ತೆ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭವಾಗಲಿದ್ದು,  ಉಡುಪಿ, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಎಸ್ ಯಡಿಯೂರಪ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಇಂದು ಉಡುಪಿಯ ಕಾಪು ಪೇಟೆಯಲ್ಲಿ ಬಿಜೆಪಿ ಸಂಕಲ್ಪ  ಸಮಾವೇಶ ನಡೆಯಲಿದ್ದು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.  ಸಮಾವೇಶದ ಸ್ಥಳದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು ಎಸ್.ಸಿ ಎಸ್ ಟಿ ಮೀಸಲಾತಿ ಹೆಚ್ಚಿಳ ಮಾಡಿದ್ದು ಹಾಗೂ ದೈವನರ್ತಕರಿಗೆ ಮಾಸಾಶನ ಯೋಜನೆ ಜಾರಿ ಮಾಡಿದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿಗೆ ಇಂದು ಸಮಾವೇಶದಲ್ಲಿ ಸನ್ಮಾನ ಮಾಡಲಿದ್ದಾರೆ.

ನ.8ರಿಂದ 11ರವರೆಗೆ ಕಲಬುರಗಿ, ಸಿಂದಗಿ, ದಾವಣಗೆರೆ, ತುಮಕೂರಲ್ಲಿ ನಡೆಯುವ ಜನಸಂಕಲ್ಪ ಯಾತ್ರೆಯಲ್ಲಿ ಅರುಣ್​ ಸಿಂಗ್​ ಭಾಗಿಯಾಗಲಿದ್ದಾರೆ.

Key words: BJP-janasankalpa yatre – Udupi- today.