ಇಂದು ಮೈಸೂರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್.

Promotion

ಮೈಸೂರು,ಆಗಸ್ಟ್,30,2021(www.justkannada.in): ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್  ಚುನಾವಣೆಗೆ ಮೂರು ಪಕ್ಷಗಳು ಸಿದ್ಧತೆ ಆರಂಭಿಸಿದ್ದು ಈ ಮಧ್ಯೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್  ಮೈಸೂರಿಗೆ ಆಗಮಿಸುತ್ತಿದ್ದಾರೆ.

ಇಂದು ರಾತ್ರಿ 8:30ಕ್ಕೆ ಮೈಸೂರಿಗೆ ಆಗಮಿಸಲಿರುವ ಅರುಣ್ ಸಿಂಗ್ ನಾಳೆ ಮೈಸೂರಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೊಲಂಬಿಯಾ ಏಷಿಯಾ ಜಂಕ್ಷನ್ ಬಳಿ ಬಿಜೆಪಿ ಕಾರ್ಯಕರ್ತರು ಅರುಣ್ ಸಿಂಗ್ ಅವರಿಗೆ ಸ್ವಾಗತ ಕೋರಲಿದ್ದು ನಂತರ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಈ ಮಧ್ಯೆ ನಾಳೆ ಬೆಳಿಗ್ಗೆ 8 ಗಂಟೆಗೆ ಅರುಣ್ ಸಿಂಗ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಪಡೆಯಲಿದ್ದಾರೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಮೈಸೂರು-ಚಾಮರಾಜನಗರ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆ ನಡೆಸಲಿರುವ ಅರುಣ್ ಸಿಂಗ್ ನಂತರ ಜಿಲ್ಲಾ ಕೋರ್ ಕಮಿಟಿ ಮೀಟಿಂಗ್ ನಡೆಸಿ ಚರ್ಚಿಸಲಿದ್ದಾರೆ.

ಇದಾದ ಬಳಿಕ ಸಂಜೆ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಲಿದ್ದಾರೆ. ಮೈಸೂರು-ಚಾಮರಾಜನಗರ ಭಾಗದಲ್ಲಿ ಪಕ್ಷ ಸಂಘಟನೆ ಕುರಿತು ಸಭೆಗಳಲ್ಲಿ ಅರುಣ್ ಸಿಂಗ್ ಸಲಹೆ ಸೂಚನೆ ನೀಡಲಿದ್ದಾರೆ. ಇನ್ನು ಸೆಪ್ಟಂಬರ್ 1ರಂದು ಅರುಣ್ ಸಿಂಗ್ ಹಾಸನ ಪ್ರವಾಸ ಕೈಗೊಂಡಿದ್ದಾರೆ.

ENGLISH SUMMARY…

State BJP incharge Arun Singh to visit Mysuru today
Mysuru, August 30, 2021 (www.justkannada.in): All the three major national parties have started preparing to face the Zilla Panchayat and Taluk Panchayat elections. The BJP is developing strategies to win maximum seats in these elections. State BJP Incharge Arun Singh is visiting Mysuru today in this regard.
Arun Singh will arrive at Mysuru today at 8.30 pm and take part in several programs. He will be welcomed near the Columbia Asia Hospital junction by the party workers, and he will stay at the Government Guest House.
Tomorrow at 8.00, he will visit the Chamundi hills to take the blessings of Goddess Chamundeshwari. At 11.00 am he will participate in the Mysuru-Chamarajanagara District level office-bearer’s meeting, followed by the District Core Committee meeting.
In the evening, he will conduct the Mandal Chairman and General Secretaries meeting. It is said that he will be giving some suggestions regarding organizing the party in Mysuru-Chamarajanagara Districts. Arun Singh will also tour Hassan District on September 1.
Keywords: State BJP chief/ Arun Singh/ Mysuru visit/ today/ meeting

Key words: bjp -in charge – Arun Singh -Mysore -today