ದೆಹಲಿಗೆ ಬರುವಂತೆ ಸಚಿವ ಅರವಿಂದ ಲಿಂಬಾವಳಿಗೆ ಹೈಕಮಾಂಡ್ ಬುಲಾವ್….

Promotion

ಬೆಂಗಳೂರು,ಮಾರ್ಚ್,5,2021(www.justkannada.in): ದೆಹಲಿಗೆ ಬರುವಂತೆ ಅರಣ್ಯ ಸಚಿವ ಅರವಿಂದ ಲಿಂಬಾವಳಿಗೆ ಪಕ್ಷದ ಹೈಕಮಾಂಡ್ ಬುಲಾವ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.jk

ಸಚಿವ ಅರವಿಂದ ಲಿಂಬಾವಳಿ ಸದ್ಯ ಕಲ್ಬುರ್ಗಿ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಈ ನಡುವೆ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ  ಕಲ್ಬುರ್ಗಿ ಪ್ರವಾಸ ಮೊಟಕುಗೊಳಿಸಿ ನಾಳೆ ಅರವಿಂದ ಲಿಂಬಾವಳಿ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.bjp-High Command -Minister -Arvind Limbavali- Delhi.

ಇನ್ನು ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಪಕ್ಷದಲ್ಲಿ ಚುನಾವಣಾ ತಯಾರಿ ನಡೆಸಲಾಗುತ್ತಿದೆ. ಈ ಮಧ್ಯೆ ಸಚಿವ ಅರವಿಂದ ಲಿಂಬಾವಳಿಗೆ ಪಶ್ಚಿಮ ಬಂಗಾಳ ಚುನಾವಣೆ ಹೊಣೆ ನೀಡಲಾಗುತ್ತದೆಯೇ ಎಂಬ ಕುತೂಹಲ ಉಂಟಾಗಿದೆ.

Key words: bjp-High Command -Minister -Arvind Limbavali- Delhi.