ನನ್ನ ಜನ್ಮದಿನದ ಜಯಭೇರಿ ನೋಡಿ ಬಿಜೆಪಿ ಹೆದರಿದೆ- ಮಾಜಿ ಸಿಎಂ ಸಿದ್ಧರಾಮಯ್ಯ.

Promotion

ಚಿಕ್ಕಬಳ್ಳಾಪುರ,ಆಗಸ್ಟ್,6,2022(www.justkannada.in): ನನ್ನ ಜನ್ಮದಿನದ ಜಯಭೇರಿ ನೋಡಿ ಬಿಜೆಪಿ ಹೆದರಿದೆ ಎಂದು  ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರ ಸಾಧನೆ ಶೂನ್ಯ. ರಾಜ್ಯದಲ್ಲಿ ಕೋಮು ಸಂಘರ್ಷ ಉಂಟು ಮಾಡುತ್ತಿದ್ದಾರೆ. ಮತ ವಿಭಜನೆಯೊಂದೇ ಅವರ ಗುರಿ.  ರೈತರು ಬಡವರ ಸಮಸ್ಯೆಗಳಿಗೆ ಉತ್ತರ ಕೊಡಲು ಆಗಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ  ಪ್ರವಾಹದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ.  ದೇವರು ಧರ್ಮ ಜಾತಿ ಅಂದುಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words:  bjp-fear-former-CM-Siddaramaiah