ಕೆಆರ್ ಎಸ್ ನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ: ದೋಣಿವಿಹಾರ ಕೇಂದ್ರ ಮುಳುಗಡೆ.

ಮಂಡ್ಯ,ಆಗಸ್ಟ್,6,2022(www.justkannada.in): ರಾಜ್ಯದಲ್ಲಿ ಮಳೆರಾಯ ಬಿಟ್ಟುಬಿಡದೇ ಅಬ್ಬರಿಸುತ್ತಿದ್ದು, ರಾಜ್ಯದ ನದಿಗಳು ತುಂಬಿ ಹರಿಯುತ್ತಿದೆ. ಈ ಮಧ್ಯೆ ಕೊಡಗು, ಮೈಸೂರು ಭಾಗದಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಕೆಆರ್ ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕೆಆರ್ ಎಸ್ ಜಲಾಶಯದಿಂದ 78 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆಆರ್ ಎಸ್ ನ ಬೃಂದಾವನಕ್ಕೂ ನೀರು ನುಗ್ಗಿದೆ.  ದೋಣಿವಿಹಾರ ಕೇಂದ್ರವೂ ಮುಳುಗಡೆಯಾಗಿದ್ದು, ದೋಣಿವಿಹಾರ. ಸಂಗೀತ ಕಾರಂಜಿ ಸ್ಥಗಿತವಾಗಿದೆ.

ಕೊಡಗಿನಲ್ಲಿ ಧಾರಾಕಾರ ಮಳೆಯಿಂದ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಆತಂಕ ಎದುರಾಗಿದೆ.

Key words: rain-krs-dam-caveri-river