ರಸ್ತೆ ಗುಂಡಿ ಸರಿ ಮಾಡುವ ಅರ್ಹತೆ, ಯೋಗ್ಯತೆ ಬಿಜೆಪಿಗೆ ಇಲ್ಲ- ನಳೀನ್ ಕುಮಾರ್ ಕಟೀಲ್ ಗೆ ಯುಟಿ ಖಾದರ್ ತಿರುಗೇಟು.

Promotion

ಮಂಗಳೂರು,ಜನವರಿ,4,2023(www.justkannada.in): ರಸ್ತೆ, ಮೋರಿ, ಚಂರಂಡಿ ಸಣ್ಣ ಸಣ್ಣ ವಿಚಾರ ಬಿಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಶಾಸಕ ಯುಟಿ ಖಾದರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಯುಟಿ ಖಾದರ್, ರಸ್ತೆ ಗುಂಡಿ ಸರಿ ಮಾಡುವ ಅರ್ಹತೆ, ಯೋಗ್ಯತೆ ಬಿಜೆಪಿಗೆ ಇಲ್ಲ. ಜನ ಡಬಲ್ ಇಂಜಿನ್ ಸರ್ಕಾರ ಕಿತ್ತೆಸೆಯುತ್ತಾರೆ . ಬಿಜೆಪಿ ಜಾತಿ ಧರ್ಮದ ಆಧಾರದಲ್ಲಿ ಬಿರುಕು ಮೂಡಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರ ಕಮ್ಯೂನಲ್ ಪ್ಯುಲ್ ಆಗಿದೆ. ಬಿಜೆಪಿ ಸೈಲೆನ್ಸರ್ ಹೊಗೆ ವಿಷ. ಅದು ಯಾರನ್ನೂ ಬದುಕಿಸಲ್ಲ ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಕುಚಲಕ್ಕಿ ತರಲು ಯೋಗ್ಯತೆ ಇಲ್ಲ. ಮುಂದೆ ರಮನಾಥ್ ರೈ ಗೆದ್ದು ಸಚಿವರಾಗುತ್ತಾರೆ. ಕಾಂಗ್ರೆಸ್  ಅಧಿಕಾರಕ್ಕೆ ಬರುತ್ತೆ ಎಂದು ಯುಟಿ ಖಾದರ್ ಹೇಳಿದರು.

Key words: BJP- does not – ability –potholes- UT Khader