ನಾಳೆ  ಬಿಜೆಪಿ ಕೋರ್ ಕಮಿಟಿ ಸಭೆ: ಸಚಿವ ಜಗದೀಶ್ ಶೆಟ್ಟರ್ ಭೇಟಿಯಾದ ಕತ್ತಿ ಬ್ರದರ್ಸ್….

bjp-core-committee-meeting-katti-brothers-meet-minister-jagdish-shetter
Promotion

ಬೆಂಗಳೂರು,ಜೂ,5,2020(www.justkannada.in): ರಾಜ್ಯಸಭೆ  ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಾಗಿ  ಕತ್ತಿ ಬ್ರದರ್ಸ್ ಲಾಬಿ ನಡೆಸುತ್ತಿದ್ದು ಇಂದು ಸಚಿವ ಜಗದೀಶ್ ಶೆಟ್ಟರ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.

ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಸಭೆಯಲ್ಲಿ ರಾಜ್ಯಸಭೆ ಚುನಾವಣೆ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಾಗುತ್ತದೆ. ಈ ಹಿನ್ನೆಲೆ ಕೋರ್ ಕಮಿಟಿ ಸದ್ಯಸರಾಗಿರುವ ಸಚಿವ ಜಗದೀಶ್ ಶೆಟ್ಟರ್ ಅವರನ್ನ ಬೆಂಗಳೂರಿನ ನಿವಾಸದಲ್ಲಿ ಶಾಸಕ ಉಮೇಶ್ ಕತ್ತಿ ಮತ್ತು ರಮೇಶ್ ಕತ್ತಿ ಭೇಟಿಯಾಗಿ ಚರ್ಚಿಸಿದರು.bjp-core-committee-meeting-katti-brothers-meet-minister-jagdish-shetter

ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಕೊಡುವಂತೆ ಶಾಸಕ ಉಮೇಶ್ ಕತ್ತಿ ಒತ್ತಾಯಿಸಿದ್ದರು. ಅಲ್ಲದೆ ತನಗೆ ಸಚಿವ ಸ್ಥಾನ ನೀಡುವಂತೆ ತೀವ್ರ ಲಾಬಿ ನಡೆಸಿದ್ದರು. ಇದೀಗ ನಾಳೆ ಕೋರ್ ಕಮಿಟಿ ಸಭೆ ಹಿನ್ನೆಲೆ ಇಂದು ಸಚಿವ ಜಗದೀಶ್ ಶೆಟ್ಟರ್ ಅವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ. ನಿನ್ನೆ ಸಿಎಂ ಬಿಎಸ್ ವೈ ಅವರನ್ನೂ ಭೇಟಿಯಾಗಿದ್ದರು.

Key words: BJP- Core Committee- Meeting-katti Brothers -meet –Minister- Jagdish Shetter.