ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು.

ಬೆಂಗಳೂರು,ಅಕ್ಟೋಬರ್,12,2022(www.justkannada.in):  ಸರ್ಕಾರಿ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ ಆರೋಪದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್​​​ ಭಟ್​ ವಿರುದ್ಧ ಲೋಕಾಯುಕ್ತಗೆ ಬಿಜೆಪಿ ಮುಖಂಡ ಎನ್.ಆರ್.ರಮೆಶ್ ದೂರು ನೀಡಿದ್ದಾರೆ.

ಖಾಸಗಿ ಬಿಲ್ಡರ್​​​ ಅಶೋಕ್​ ಧಾರಿವಾಲ್ ಎಂಬುವವರಿಗೆ ಕಾನೂನುಬಾಹಿರವಾಗಿ ಭೂಮಿಯನ್ನು ಡಿ-ನೊಟಿಫೈ ಮಾಡಿಕೊಡಲಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು ಕಸಬಾ ಹೋಬಳಿಯ ಸಿದ್ದಾಪುರದ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸರ್ವೆ ನಂಬರ್ 27/1, 28/4, 28/5 ಮತ್ತು 28/6 ರಲ್ಲಿರುವ ಸುಮಾರು 2.39 ಎಕರೆ ಭೂಮಿಯನ್ನು ಡಿ-ನೋಟಿಫೈ ಮಾಡಲಾಗಿದೆ. ಈ ಭೂಮಿಯ ಮೌಲ್ಯವು ₹ 200 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಭಾವಿ ಬಿಲ್ಡರ್ ಒಬ್ಬರ ಹಣದ ಪ್ರಭಾವಕ್ಕೆ ಒಳಗಾಗಿ ಕಾನೂನುಬಾಹಿರವಾಗಿ ಸರ್ಕಾರಿ ಸ್ವತ್ತನ್ನು ರಿ-ಡೂ (Re-Do) ಎಂಬ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಎನ್ ಆರ್ ರಮೇಶ್ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

Key words: BJP-Complaint – Lokayukta –against- former CM- Siddaramaiah.

ENGLISH SUMMARY…

Complaint to Lokayukta against former CM Siddaramaiah
Bengaluru, October 12, 2022 (www.justkannada.in): BJP leader N.R. Ramesh has complained with the Lokayukta against former Chief Minister Siddaramaiah and retired IAS officer Shyam Bhat, alleging their involvement in the denotification of government land.
It is alleged that a piece of government land was illegally denotified to sanction it to a private builder named Ashok Dhariwal. This land is located at the Siddapura, in Kasaba Hobli, in Bengaluru South Taluk, and is meant for public park and public use, it is alleged.
The land measuring 2.39 acres located at Survey No.s 27/1, 28/4, 28/5, and 28/6 has been denotified. The total value of this land is said to be around Rs.200 crore. It is alleged that this piece of land has been denotified yielding to influence from an influential builder and has been denotified in the name of Re-Do.
Keywords: Former CM Siddaramaiah/ retd. IAS officer Shyam Bhat/ illegal denotification