ಬಿಎಸ್ ವೈ ಯಾವತ್ತೂ ಜಗ್ಗಲ್ಲ, ಕುಗ್ಗಲ್ಲ: ಜನರ ಹೃದಯ ಸಿಂಹಾಸನದಲ್ಲಿದ್ದಾರೆ- ಸಿಎಂ ಬೊಮ್ಮಾಯಿ.

ಹೊಸಪೇಟೆ,ಅಕ್ಟೋಬರ್,12,2022(www.justkannada.in): ಬಿಎಸ್ ವೈ ಯಾವತ್ತೂ ಜಗ್ಗಲ್ಲ, ಕುಗ್ಗಲ್ಲ: ಅವರು ರಾಜ್ಯದ ಜನರ ಹೃದಯ ಸಿಂಹಾಸನದಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ‍್ಧರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಗುಡುಗಿದರು.

ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಭಾಷಣ ಮಾಡಿ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಸಿಎಂ ಬಸವರಾಜ ಬೊಮ್ಮಾಯಿ,  ಸಿದ್ಧರಾಮಯ್ಯ ಯಾವಾಗಲೂ ವಿತಂಡವಾದ ಮಾಡುತ್ತಾರೆ. ಪ್ರಧಾನಿ ಮೋದಿ ಅವರು ನೆಹರು ಪಾದ ಧೂಳಿಗೆ ಸಮ ಅಂತಾ ಹೇಳಿದ್ದಾರೆ. ಮಹಾತ್ಮಗಾಂಧಿ ಪಾದದ ಧೂಳಿಗೂ ನೆಹರು ಸಮರಲ್ಲ. ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಮೋದಿ ಅವರು ದೇಶ ಕಟ್ಟುವ ಕೆಲಸವನ್ನ ಮಾಡುತ್ತಿದ್ದಾರೆ  ಎಂದು  ತಿರುಗೇಟು ನೀಡಿದರು.

ನಿನ್ನೆ ರಾಜಾಹುಲಿ ಗರ್ಜನೆಗೆ ಕಾಂಗ್ರೆಸ್​​ನವರು ತತ್ತರಿಸಿದ್ದಾರೆ. ಯಡಿಯೂರಪ್ಪಗೆ ಅರಳು ಮರಳು ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.  ಯಡಿಯೂರಪ್ಪ ಯಾವತ್ತೂ ಜಗ್ಗಲ್ಲ ಕುಗ್ಗಲ್ಲ. ಯಡಿಯೂರಪ್ಪ ಯಾವತ್ತೂ ಅರಳು ಅವರು ಮರಳಲ್ಲ. ಬಿಎಸ್ ವೈ ಈಗಲೂ ರಾಜ್ಯದ ಜನರ ಮನದಲ್ಲಿದ್ದಾರೆ. ಸಿದ್ದರಾಮಯ್ಯರ ಹೇಳಿಕೆ ನೋಡಿದ್ರೆ ಅವರಿಗೆ ಅರಳು ಮರಳು ಆದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

Key words: bjp-CM Basavaraj bommai-BS yeddyurappa-Former CM-Siddaramaiah