ಕೋಲಾರದಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು- ಮೈತ್ರಿ ಅಭ್ಯರ್ಥಿ ಕೆ.ಹೆಚ್ ಮುನಿಯಪ್ಪಗೆ ಮಾಜಿ ಶಾಸಕ ಟಾಂಗ್…

Promotion

ಕೋಲಾರ,ಮೇ,4,2019(www.justkannada.in): ಕೋಲಾರ ಬಿಜೆಪಿ ಅಭ್ಯರ್ಥಿ  ಮುನಿಯಪ್ಪ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಶಾಸಕ ಕೊತ್ತೂರು ಮಂಜು ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪಗೆ ಟಾಂಗ್ ನೀಡಿದರು.

ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಶಾಸಕ ಕೊತ್ತೂರು ಮಂಜು, ನಾನು ಪುಟ್ ಬಾತ್ ಮಂಜು ಅಲ್ಲ. ನಾನು ಕೊತ್ತೂರು ಮಂಜು. ಕೊತ್ತೂರು ಮಂಜು ಏನೆಂದು ಎಲ್ಲರಿಗೂ ಗೊತ್ತಿದೆ. ನಾನು ನ್ಯಾಯ-ನೀತಿ, ಧರ್ಮ ಪಾಲನೆ ಮಾಡುವವನು. ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳಿದರು.

ಚುನಾವಣೆ ಅಂದಾಗ ಯಾರಾದರೂ ಒಬ್ಬರ ಪರ ಕೆಲಸ ಮಾಡಬೇಕು. ಇದಕ್ಕೆ ನೋಡಿಕೊಳ್ತೀನಿ ಅಂದರೆ ನಾವು ನೋಡಿಕೊಳ್ತೀವಿ. ಅವರು ನೋಡಿಕೊಂಡಾದ ಮೇಲೆ ನಾವು ನೋಡಿಕೊಳ್ಳುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ವಿರುದ್ದ ಕಿಡಿಕಾರಿದರು.

ಕೆಪಿಸಿಸಿಯಿಂದ ನೀಡಿರುವ ನೋಟಿಸ್ ಕುರಿತು ಪ್ರತಿಕ್ರಿಯಸಿದ ಕೊತ್ತೂರು ಮಂಜು,  ಸಸ್ಪೆಂಡ್ ಮಾಡುತ್ತಾರೆ ಅನ್ನುವುದಾದರೇ ಮಾಡಲಿ ಬಿಡಿ. ಅದು ಏನು ಡಿಸಿ-ಎಸಿ ಕೆಲಸ ಅಲ್ಲ. ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ತಿರುಗೇಟು ನೀಡಿದರು.

Key words: BJP -candidate -wins -2 lakh -votes –Kolar-former MLA- Tang – alliance candidate- KH Muniyappa.