ಉಪಚುನಾವಣೆ ಬಳಿಕ ಬಿಜೆಪಿಗೆ ಸಂಕಷ್ಟ- ಅನರ್ಹರೇನು ಸ್ವತಂತ್ರ ಹೋರಾಟ ಮಾಡಿದ್ದಾರಾ..? ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

ಮೈಸೂರು,ನ,16,2019(www.justkannada.in): ಬಿಜೆಪಿಯವರು ಉಪಚುನಾವಣೆಯಲ್ಲಿ 8 ಸ್ಥಾನ ಗೆಲ್ಲೋಲ್ಲ. ಉಪಚುನಾವಣೆ ನಂತರ ಬಿಜೆಪಿಗೆ ಸಂಕಷ್ಟ ಇದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ ನುಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಉಪಚುನಾವಣೆಯಲ್ಲಿ ಅಕ್ರಮ ಮಾಡಲು ಸಜ್ಜಾಗಿದ್ದಾರೆ. ಮೈಸೂರಿನಲ್ಲಿ ಯೋಗೇಶ್ವರ್ ಪೋಟೋ ಇರೋ ಸೀರೆಗಳು ಸಿಕ್ಕಿವೆ. ಇದೆಲ್ಲಾ ಚುನಾವಣಾ ಅಕ್ರಮವನ್ನ ಎತ್ತಿ ತೋರಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಅನರ್ಹರೆಲ್ಲ ತ್ಯಾಗಿಗಳಲ್ಲ, ಇವರೆಲ್ಲ ಸ್ವಾರ್ಥಿಗಳು…

ಅನರ್ಹ ಶಾಸಕರು ಅಪರೇಷನ್ ಕಮಲ ರಹಸ್ಯ ಬಯಲು ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೋರ್ಟ್ ತೀರ್ಪು ಬಂದ ನಂತರ ಒಬ್ಬೊಬ್ಬರೆ ಸತ್ಯ ಹೇಳುತ್ತಿದ್ದಾರೆ. ಜನರಿಗೆ ಅದು ಈಗ ಅರ್ಥವಾಗುತ್ತಿದೆ. ಅವರು ಏನೆ ಕಥೆ ಹೇಳಿದರು ಅನರ್ಹತೆ ಪಟ್ಟಿಯಲ್ಲೆ ಜನರ ಮುಂದೆ ಹೋಗಬೇಕು. ಅವರಿಗಂಟಿರುವ ಅನರ್ಹರ ಪಟ್ಟ ಹೋಗಿಲ್ಲ. ರಮೇಶ್ ಜಾರಕಿಹೋಳಿಯಂತವರ ಮಾತುಗಳಿಗೆ ಕಿಮ್ಮತ್ತಿಲ್ಲ‌. ಅನರ್ಹರಾಗಿರುವ ಕಾರಣ ಏನೇನೋ ಮಾತನಾಡುತ್ತಿದ್ದಾರೆ. ಅನರ್ಹರೆಲ್ಲ ತ್ಯಾಗಿಗಳಲ್ಲ, ಇವರೆಲ್ಲ ಸ್ವಾರ್ಥಿಗಳು. ಇವರೇನು ಸ್ವತಂತ್ರ ಹೋರಾಟ ಮಾಡಿದ್ದಾರ ತ್ಯಾಗ ಮಾಡಿದ್ದಾರಾ. ತ್ಯಾಗ ಮಾಡಿದ್ದು ಗಾಂಧಿ, ನೆಹರು, ಇಂದಿರಾಗಾಂಧಿ, ಸೋನಿಯಾಗಾಂಧಿ. ಇವರೆಲ್ಲಾ ಸ್ವಾರ್ಥಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ನುಡಿದರು.

ಅನರ್ಹರಿಗೆ ಸಚಿವರಾಗಿ ಮಾಡುವ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇದು ಚುನಾವಣೆ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ. ಬಿಜೆಪಿಗೆ ಯಾವುದೆ ನೀತಿ ಸಂಹಿತೆ ಅಡ್ಡಿ ಇರುವುದಿಲ್ಲವಾ. ಬಿಜೆಪಿ ಇಂತಹ ಮಾತು ಅಕ್ರಮಗಳಿಂದ ಚುನಾವಣೆ ಎದುರಿಸಲು ಸಜ್ಜಾಗಿದೆ. ಶಂಕರ್‌ಗೆ ಎಂಎಲ್‌ಸಿ ಮಾಡಿ ಮಂತ್ರಿ ಮಾಡ್ತಿನಿ ಅಂತ ಸಿಎಂ ಅವರೇ ಹೇಳ್ತಾರೆ. ಇಂತವರೆಲ್ಲ ಸಿಎಂ ಸ್ಥಾನದಲ್ಲಿ ಕೂರಬೇಕಾ ಎಂದು ಹರಿಹಾಯ್ದರು.

Key words: BJP – after- by-election- Trouble-Former CM- Siddaramaiah