‘ಧಮ್ ಇದ್ರೆ ಅರೆಸ್ಟ್ ಮಾಡಿಸಿ ಹೋಮ್ ಮಿನಿಸ್ಟರ್’: ಗೃಹ ಸಚಿವರಿಗೆ ಡಿಕೆ ಶಿವಕುಮಾರ್  ಸವಾಲು.

Promotion

ಬೆಂಗಳೂರು,ನವೆಂಬರ್,10,2021(www.justkannada.in): ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನಾಯಕರ ಮಗನ ಹೆಸರಿದೆ ಎಂದು ಗೃಹ ಸಚಿವರು ಹೇಳುತ್ತಾರೆ. ಯಾರೇ ಇದ್ದರೂ ಅಂತವರನ್ನ ಬಂಧಿಸಿ. ‘ಧಮ್ ಇದ್ರೆ ಅರೆಸ್ಟ್ ಮಾಡಿಸಿ ಹೋಮ್ ಮಿನಿಸ್ಟರ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಮೊದಲು ಬಿಟ್ ಕಾಯಿನ್ ಕೇಸ್ ದಾಖಲೆ ಬಿಡುಗಡೆಗೊಳಿಸಿ. ಬಿಟ್ ಕಾಯಿನ್ ಇಡಿ ತನಿಖೆಗೆ ವಹಿಸಿದ್ದಾಗಿ ಹೇಳಿದ್ದಾರೆ. ಯಾವ ತನಿಖೆಗೆ ವಹಿಸಿದ್ದಾರೆಂದು ಸಿಎಂ ಜನರ ಮುಂದಿಡಲಿ. ಎಷ್ಟು ಕಾಯಿನ್ ಜಪ್ತಿ ಮಾಡಿದ್ದೀರಿ. ದಂಧೆಯಲ್ಲಿ ಎಷ್ಟು ಅಧಿಕಾರಿಗಳಿದ್ದಾರೆ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನಾಯಕರ ಪುತ್ರನಿದ್ದಾರೆ ಎಂದಿದ್ದಾರೆ.  ಯಾರೇ ಇದ್ದರೂ ಬಂಧಿಸಲಿ. ಗೃಹ ಸಚಿವರು ಸಚಿವರು, ಅಧಿಕಾರಿಗಳನ್ನೇಕೆ ರಕ್ಷಿಸುತ್ತಿದ್ದಾರೆ. ತನಿಖೆಯಾದರೇ ಎಷ್ಟು ಜನರ ಹೆಸರು ಬಹಿರಂಗವಾಗುತ್ತೆ ಎಂದು ಗೃಹ ಸಚಿವರಿಗೆ ಮಾಹಿತಿ ಇದೆಯಾ ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.

Key words: bit coin- Arrest-Home Minister-kpcc-president-DK Sivakumar- challenges