ಬಿಟ್ ಕಾಯಿನ್ ದಂಧೆ ವಿಚಾರ: ಡಿಕೆಶಿ ಮತ್ತು ಸಿದ್ಧರಾಮಯ್ಯಗೆ ಸವಾಲು ಹಾಕಿದ ಸಚಿವ ಕೆ.ಎಸ್ ಈಶ್ವರಪ್ಪ.

ಕೊಪ್ಪಳ,ನವೆಂಬರ್,10,2021(www.justkannada.in):  ಬಿಟ್ ಕಾಯಿನ್ ದಂಧೆ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ಸ ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ದಂಧೆಯಲ್ಲಿ ಭಾಗಿಯಾಗಿದ್ದರೇ ಬಿಜೆಪಿಯವರ ಒಬ್ಬರ ಹೆಸರನ್ನಾದ್ರೂ ಹೇಳಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಗೆ ಸಚಿವ ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದರು.

ಕೊಪ್ಪಳದಲ್ಲಿ ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ನವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಅಧಿಕಾರಿಗಳನ್ನ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಬರೀ ಸುಳ್ಳು ಹೇಳುತ್ತಿದ್ದಾರೆ. ಪ್ರಾಮಾಣಿಕರಿದ್ರೆ ಡಿಕೆ ಶಿವಕುಮಾರ್ ದಾಖಲೆ ತೋರಿಸಲಿ. ಬಿಜೆಪಿಯ ಇಬ್ಬರ ಹೆಸರನ್ನಾದ್ರೂ ಹೇಳಿದ್ರೆ ನಾನೇ ಶ್ಲಾಘಿಸುತ್ತೇನೆ ಎಂದು ಟಾಂಗ್ ನೀಡಿದರು.

ಬಿಟ್ ಕಾಯಿನ್ ದಂಧೆ ವಿಚಾರದಲ್ಲಿ ಸಿಎಂ ಬೊಮ್ಮಾಯಿಗೆ ಕಂಟಕ ಇದೆ ಅಂತಿದ್ದಾರೆ. ಆದ್ರೆ ಈ ಬಗ್ಗೆ ದಾಖಲೆ ಕೊಡಲಿ ನೋಡೋಣ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: Bit coin –threading- issue-Minister- KS Eshwarappa- challenged- DK Shivakumar-Siddaramaiah.