ಮಳವಳ್ಳಿ ತಾಲ್ಲೂಕಿನಲ್ಲಿ ‘ಲೇಕ್ ಮ್ಯಾನ್’ ಕಾಮೇಗೌಡರ ಜೀವನ ಚರಿತ್ರೆಗೆ ದೃಶ್ಯರೂಪ

Promotion

ಬೆಂಗಳೂರು, ಜುಲೈ 07, 2020 (www.justkannada.in): ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ವಾಸ ಮಾಡುತ್ತಿರುವ ಕಾಮೇಗೌಡ ಅವರ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಸ್ಯಾಂಡಲ್ ವುಡ್ ನಿರ್ದೇಶಕ ದಯಾಳ್ ಪದ್ಮನಾಭನ್ ಸಿದ್ಧತೆ ನಡೆಸಿದ್ದಾರೆ.

ಸಧ್ಯಕ್ಕೆ, ಇವರ ಜೀವನಾಧಾರಿತ ಸಾಕ್ಷ್ಯ ಚಿತ್ರಕ್ಕೆ “ದಿ ಗುಡ್ ಶೆಫರ್ಡ್” ಎಂಬ ಶೀರ್ಷಿಕೆ ಇಟ್ಟು, ಇವರ ಫೋಟೋ ಇರುವ ಒಂದು ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಶೂಟಿಂಗ್ ಬೆಗೆಗಿನ ವಿಷಯ ಮತ್ತು ಇತರ ಮಾಹಿತಿಗಳನ್ನು ಶೀಘ್ರದಲ್ಲೇ ಬಹಿರಂಗ ಪಡಿಸಲಿದ್ದಾರೆ ನಿರ್ದೇಶಕರು. ಈ ಸಾಕ್ಷ್ಯಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಅವಿನಾಶ್ ಯು ಶೆಟ್ಟಿ ಅವರು ತೆಗೆದುಕೊಂಡಿದ್ದಾರೆ.